Wednesday, August 15, 2007

ಜಾನು ಮತ್ತು ಚಿನ್ನು ಗುಬ್ಬಿ




ಚಿನ್ನು ಗುಬ್ಬಿ (ಮೋಹಕ ರಂಗು ರಂಗಿನ ಮಾತಿನಮಲ್ಲ)

ಜಾನು ಗುಬ್ಬಿ (ಸರಳ ಮತ್ತು ಮುಗ್ದ ಮನಸ್ಸಿನ ಸುಂದರ ಸೊಬಗಿನ ರಾಜಕುಮಾರಿ)



ಚಿನ್ನು ಸುಖಪುರುಷಾರ್ಥ ಗುಬ್ಬಿ, ಸದಾ ತನ್ನ ಮೊಗದ ಮೇಲೆ 3 ಇಂಚಿನ ನಗುವನ್ನು ಇಟ್ಟುಕೊಂಡು ಬೇರೆಯವರಿಗೆ 6 ಇಂಚಿನ ನಗುವನ್ನು ಕೊಡುವ ಅಪರಂಜಿ ಮನಸ್ಸಿನದು. ತನ್ನ ತಂದೆ/ತಾಯಿ ಮತ್ತು ಆತ್ಮೀಯ ಗೆಳೆಯ/ಗೆಳತಿಯರೊಂದಿಗೆ ನಗು, ನಗುತಾ/ನಲಿಯುತ್ತಾ ಅನ್ಯೋನ್ಯವಾಗಿ ತನ್ನ ಜೀವನವನ್ನು ಸಾಗಿಸುತ್ತಾ ಇತ್ತು. ವಾಸಿಸಲು ಹೂದೋಟದ ಮಧ್ಯೆ ಆಕಶಗಲಕ್ಕೆ ಬೆಳೆದು ನಿಂತಿರುವ ಒಂದು ಚಿಕ್ಕ ಹೂವ್ವಿನ ಗಿಡದಲ್ಲಿ ಚಿಕ್ಕ ಮತ್ತು ಚೊಕ್ಕದಾಂತಹ ಸುಂದರ ಗೂಡು. ದಿನವಿಡಿ ತನ್ನ ಗೆಳೆಯ/ಗೆಳತಿಯರೊಂದಿಗೆ ಒಂದು ಹೂದೋಟದಿಂದ ಇನ್ನೊಂದ ಹೂದೋಟಕ್ಕೆ, ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುತ್ತ, ಜಿಗಿಯುತ್ತ, ತನ್ನ ಮಧುರ ಕಂಠದಿಂದ ಸೊಗಸಾದ ಹಾಡುಗಳನ್ನು ಹಾಡುತ್ತಾ ಕಾಳುಗಳನ್ನು ಶೇಖರಿಸುತ್ತಾ ಕಾಲವನ್ನು ಕಳೆಯುತಿತ್ತು.

ಒಂದು ದಿನ ಬೆಳಿಗ್ಗೆ ತಾಯಿ ಗುಬ್ಬಿ ಚಿನ್ನುಗೆ ಕಾಳಿನ ಮಾರುಕಟ್ಟೆಗೆ ಹೋಗಿ ಅಕ್ಕಿ ಕಾಳುಗಳನ್ನು ತೆಗೆದುಕೊಂಡು ಬಾ ಅಂತ ಹೇಳಿ ಕಳುಹಿಸಿತು. ಚಿನ್ನು ಎಂದಿನಂತೆ ರಂಗು ರಂಗಿನ ಶರ್ಟ/ಪ್ಯಾಂಟನ್ನು ಹಾಕಿಕೊಂಡು ತಯಾರಾಗಿ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹಾರುತ್ತಾ ಸ್ವಲ್ಪ ದೂರದಲ್ಲಿಯೇ ದೊಡ್ಡ ಆಲದ ಮರದ ಮೇಲೆ ಇದ್ದ ಮಾರುಕಟ್ಟೆಯನ್ನು ತಲುಪಿತು. ಹಾಗೆ ಮಾರುಕಟ್ಟೆಯಲ್ಲಿ ವಿಹರಿಸುತ್ತಾ,ಉತ್ತಮ ದರ್ಜೆಯ ಅಕ್ಕಿ ಕಾಳನ್ನು ಹುಡುಕುತ್ತಾ ಹೋಗುತ್ತಾ ಇದ್ಡಾಗಾ ಒಮ್ಮೆಲೇ ಚಿನ್ನುವಿಗೆ ಕಣ್ಣುಗಳು ಕುಕ್ಕುವ ಹಾಗೆ ದೂರದಲ್ಲಿ ಒಂದು ಹೊಳಪಿನ ಬಿಂದು ಕಂಡಂತಾಯಿತು, ತನ್ನ ಕಣ್ನಗಳನ್ನು ತಿಕ್ಕಿಕೊಳ್ಳುತ್ತಾ ಚಿನ್ನು ಆ ಹೊಳೆಯುವ ಬಿಂದುವನ್ನೇ ಹಿಂಬಾಲಿಸುತ್ತಾ ಹೊರಟು ನಿಂತಿತ್ತು. ಅದು ಏನೋ ಒಂದು ಚುಂಬಕ ಶಕ್ತಿ ಆ ಹೊಳಪಿನ ಬಿಂದುವಿನಲ್ಲಿತ್ತೋ, ಚಿನ್ನುನನ್ನು ತನ್ನ ಕಡೆ ಎಳೆದುಕೊಳ್ಳುತಿತ್ತು. ಸ್ವಲ್ಪ ದೂರ ಹೋದ ಮೇಲೆ ಚಿನ್ನು ಆಶ್ಚರ್ಯಚಕಿತವಾಗಿ ಅಲ್ಲೇ ನಿಂತಲ್ಲೇ ನಿಂತು ಬಿಟ್ಟಿತು ಕಾರಣ ಅದರ ಮುಂದೆ ಒಂದು ತಿಳಿ ಹಳದಿ ಬಣ್ಣದ ಸೀರೆಯನ್ನುಟ್ಟು ಕೊಂಡ ಪುಟ್ಟ ಹೆಣ್ಣು ಗುಬ್ಬಚಿ ಮುಂದೆ ನಿಂತಿತ್ತು, ಹಣೆಯಲಿ ಚಂದಾಮಾಮನಾಕಾರದ ಕುಂಕುಮ, ಜಡೆಯಲಿ ೧ ಮಳದ ಸುಮಧುರ ಸುಹಾಸನೆ ಬೀರುವ ಸೂಜಿ ಮಲ್ಲಿಗೆ, ಮುಗಿನಲ್ಲಿ ಚಿಕ್ಕದೊಂದು ನತ್ತು, ಕಿವಿಯಲ್ಲಿ ಒಲೆಗಳು.. ಆಹಾ!! ನೋಡಲು ದೇವಲೋಕದಿಂದ ಭೂವಿಗಿಳಿದ ಅಪ್ಸರೆನೇ ಸರಿ.
ಆ ಗುಬ್ಬಚಿಯ ಮೊಗದಲ್ಲಿ ಅದು ಏನೋ ಒಂದು ಆಕರ್ಷಣೆ ಇತ್ತು, ಸುಂದರತೆಯ ದೇವತೆ ಆದ ಆ ಗುಬ್ಬಚಿಯ ಮೊಗದಲ್ಲಿ ಮುಗ್ದತೆಯೂ ತುಂಬಿ ತುಳುಕುತ್ತಾ ಇತ್ತು. ಗುಬ್ಬಚಿಯ ಕಿವಿಯಲ್ಲಿಯ ಓಲೆಗಳು ಲಕಾಲಕನೆ ಹೊಳೆಯುತ್ತಾ ಇದ್ದವು. ಹೊಳೆಯುವ ಬಿಂದು ಇದೆ ಅಂತ ಗೊತ್ತಾದ ಮೇಲೆ ಚಿನ್ನು ಆ ಗುಬ್ಬಚಿಯ ಮೊಗವನ್ನು ಸವಿಯುತ್ತಾ ಹಾಗೆ ಸ್ವಲ್ಪ ಹೊತ್ತು ಅಲ್ಲೇ ನಿಂತಿತು, ಆಮೇಲೆ ಒಮ್ಮೆಲೇ ಕನಸಿನ ಲೋಕದಿಂದ ಹೊರಬಂದಾಗ ತನ್ನ ಮುಂದೆ ಆ ಗುಬ್ಬಚಿಯನ್ನು ಕಾಣದಿದ್ದಾಗ, ಅದಕ್ಕೆ ತನ್ನ ಕಾಲಿನ ಕೆಳಗಿನ ಭೂಮಿಯೇ ಒಮ್ಮೆಲೇ ಕುಸಿದಂತಾಯಿತು, ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು. ಚಿನ್ನುಯಿನ ಕಣ್ಣುಗಳು ಗುಬ್ಬಚಿಯನ್ನು ಇಡೀ ಮಾರುಕಟ್ಟೆಯ ಪ್ರತಿಯೊಂದು ಅಂಗಡಿಯಲ್ಲಿ, ಆ ಆಲದ ಮರದ ಪ್ರತಿಯೊಂದು ಟೊಂಗೆಯಲ್ಲಿ 4-5 ಬಾರಿ ಹುಡುಕಿದವು. ಆದರೆ ಆ ಗುಬ್ಬಚಿಯೂ ಕೊನೆಗೂ ಕಾಣಲೇ ಇಲ್ಲ. ನೊಂದ ಚಿನ್ನು, ತಾಯಿ ಹೇಳಿದ ಹಾಗೆ ಅಕ್ಕಿ ಕಾಳನ್ನು ತೆಗೆದುಕೊಂಡು ಮರಳಿ ಮನೆಗೆ ಬಂತು. ಮನೆಗೆ ವಾಪಸ ಆದಾಗ ತಾಯಿ ಯಾಕೋ ಚಿನ್ನು ಇಷ್ಟು ತಡ ಮಾಡಿದೆ ಅಲ್ಲಾ, ಏನಾಯಿತು ಅಂತಾ ಕೇಳಿತು. ಆದ್ರೆ ಚಿನ್ನು ಏನು ಉತ್ತರ ಕೊಡದೇ ತನ್ನ ಕೊಣೆಗೆ ಹೊರಟು ಹೋಯಿತು. ಅವತ್ತು ಪೂರ್ತಿ ರಾತ್ರಿ ಚಿನ್ನು ಮಲಗಲೇ ಇಲ್ಲಾ. ಪ್ರತಿ ಕ್ಷಣವು ಆ ಗುಬ್ಬಚಿದೇ ಧ್ಯಾನ, ಕಣ್ಣು ಮುಚ್ಚಿದರೆ, ಕಣ್ಣು ತೆರೆದರೆ ಅದೇ ಗುಬ್ಬಚಿಯ ಮುಖವೂ ಕಣ್ಣ ಮುಂದೆ ಬಂದತ್ತಾಗುತ್ತಾ ಇತ್ತು, ಆ ಸುಂದರವಾದ ಮುಖ ಕಣ್ಣ ಮುಂದೇನೇ ಬಂದು ಕಾಡುತ್ತಾ ಇತ್ತು.ನಿದ್ದೇನೆ ಬರದೇ ಹಾಗೆ ಸ್ವಲ್ಪ ಹೊತ್ತು ಹಾಸಿಗೆಯಲ್ಲಿಯೇ ವದ್ದಾಡುತ್ತಾ, ಚಡಪಡಿಸುತ್ತಾ ಕಾಲ ಕಳೆಯಿತು.ಎನೇ ಆಗಲಿ ನಾಳೆ ಮತ್ತೆ ಆ ಮಾರುಕಟ್ಟೆಗೆ ಹೋಗಿ ಆ ಗುಬ್ಬಚಿಯ ಬಗ್ಗೆ ಇನ್ನಷ್ಟು ವಿವರವನ್ನು ತಿಳಿದೂಕೊಬೇಕೆಂದು ನಿರ್ಧರಿಸಿ ನಿದ್ರಾವಸ್ತೆಯಲ್ಲಿ ಹೋಯಿತು.

ಮರುದಿನ ಚಿನ್ನು ಸೂರ್ಯ ತನ್ನ ಬೆಳಕಣ್ಣು ಭೂಮಿಗೆ ಚಿಮ್ಮುವ ಮೊದಲೇ ಎದ್ದು ಬೇಗನೆ ತಯಾರ ಆಗಿ, ತಾಯಿಗೆ ಇಲ್ಲೇ ಹೊರಗಡೆ ಗೆಳೆಯನಿಗೆ ಭೇಟಿ ಆಗಿ ಬರುತ್ತೇನೆ ಎಂದು ಹೇಳಿ ಮಾರುಕಟ್ಟೆಯ ದಿಕ್ಕಿನಲ್ಲಿ ಹಾರಿತು. ನಿನ್ನೆ ಎಲ್ಲಿ ಆ ಗುಬ್ಬಚಿಯೂ ಸಿಕ್ಕಿತಲ್ಲಾ ಅಲ್ಲೇ ಹೋಗಿ ಅದರ ದಾರಿ ಕಾಯುತ್ತಾ ನಿಂತಿತು. ಮನಸ್ಸಿನಲ್ಲಿ ಏನೋ ಒಂದು ಕಳವಳ (ಗುಬ್ಬಚಿಯೂ ಬರುತಾಳೆಯೇ ಈ ದಿನವೂ, ಬಂದರೆ ನಾನು ಏನು ಅಂತಾ ಮಾತಾಡಲಿ... ಮೊದಲು ಹೆಸರು ಕೇಳಲಾ? ಅಥವಾ ತನ್ನ ಮನಸ್ಸಿನಲ್ಲಿ ಇರುವ ಭಾವನೆಯನ್ನು ಮನಸ್ಸು ಬಿಚ್ಚಿ ಹೇಳಿ ಬಿಡಲೋ? ಅಂತ ಪೆಚಾಡತಾ ಇತ್ತು).

ಸ್ವಲ್ಪ ಸಮಯದ ನಂತರ ಚಿನ್ನು ಅಂದಕೊಂಡ ಹಾಗೆ ಆ ಗುಬ್ಬಚಿ ನಿನ್ನೆ ಬಂದ ಸಮಯಕ್ಕೆ ಸರಿಯಾಗಿ ಮಾರುಕಟ್ಟೆಗೆ ಬಂದಿತು.ಅದನ್ನು ಕಂಡ ಚಿನ್ನುವಿಗೆ ಏನಿಲ್ಲದ ಖುಷಿಯು ಮನಸ್ಸಿನಿಂದ ಉಕ್ಕಿ ಹರಿಯಲಾರಂಬಿಸಿತು. ಆ ಗುಬ್ಬಚಿಯೂ ಸಹ ಚಿನ್ನುವನ್ನು ಓರೆ ನೋಟದಿಂದ ನೋಡಿ ಮನಸ್ಸಿನಲ್ಲಿಯೇ ನಗುತ್ತಾ ಮುಂದೆ ಹೋಯಿತು.ಹಸಿರು ಧ್ವಜ ಕಾನಿಸಿದ ಮೇಲೆ ಗುಬ್ಬಚಿಯ ಹಿಂದೆ ಹಾಗೆ ಸ್ವಲ್ಪ ಹೊತ್ತು ತಿರುಗಿದ ಚಿನ್ನು ಕೊನೆಗೂ ಧೈರ್ಯ ಮಾಡಿ ಆ ಗುಬ್ಬಚಿಯನ್ನು ಕೇಳೆ ಬಿಡೋಣ ಅಂತ ಆ ಗುಬ್ಬಚಿಯ ಹಿಂದೆ ಹೋಗಿ ಮೆಲ್ಲನೆ ಧ್ವನಿಯಲ್ಲಿ....

ಚಿನ್ನು: ರೀ ರೀ ....

ಗುಬ್ಬಚಿ (ತಿರುಗಿ ವಳ್ಳಿ ಒಂದು ಮುಗ್ದವಾದ ನಗೆಯನ್ನು ಕೊಟ್ಟು ): ಎನರೀ?

ಚಿನ್ನು (ಕೈಯಲ್ಲಿ ಸೂಜಿ ಮಲ್ಲಿಗೆಯನ್ನು ಹಿಡಿದುಕೊಂಡು) : ಇ ಸೂಜಿ ಮಲ್ಲಿಗೆಯೂ ನಿಮ್ಮದೆನಾ?

ಗುಬ್ಬಚಿ : ಇಲ್ಲಾರೀ ಅದು ನನ್ನದಲ್ಲಾ.

ಚಿನ್ನು: ಹೌದಾ..ರೀ ನೀವು ಕೋಪ ಮಾಡಿಕೊಳ್ಳಲ್ಲಾ ಅಂದ್ರೆ ನಾನು ಒಂದು ಮಾತನ್ನು ಕೇಳಲಾ?

ಗುಬ್ಬಚಿ : ಇಲ್ಲಾ ಮಾಡಿಕೊಳ್ಳಲ್ಲಾ, ಹಾಂ ಕೇಳಿ?

ಚಿನ್ನು: ನನ್ನ ಮನಸ್ಸಿನ ಅಂತರಂಗ ದಾಳದಲ್ಲಿ ಸುನಾಮಿಯ ಬ್ರಹತ್ತ ಅಲೆಗಳುನ್ನು ಹುಟ್ಟಿಸಿರುವ, ಹೃದಯದಲ್ಲಿ ಪ್ರೀತಿಯ ಪುಷ್ಪವನ್ನರಳಿಸಿದ, ನನ್ನ ಜೀವನದ ಉಸಿರಾಗುತ್ತಿರುವ ಇ ಸುಂದರ ಗುಬ್ಬಚಿಯ ನಾಮವನ್ನು ಕೇಳಲು ಇ ನನ್ನ 2 ಕೀವಿಗಳು ಕಾತುರದಿಂದ ಕಾಯುತ್ತಾ ಇವೆ, ನಿಮ್ಮ ಹೆಸರೇನು?

ಗುಬ್ಬಚಿ : ನಾಚಿಕೆಯಿಂದ, ಮೊದಲು ನಿಮ್ಮ ಹೆಸರು ಹೇಳಿ ಆಮೇಲೆ ನಾನು ನನ್ನ ಹೆಸರನ್ನು ಹೇಳುತ್ತೇನೆ.

ಚಿನ್ನು: (ಅದಕ್ಕೆ ತಟ್ಟನೆ) ನನ್ನ ಹೆಸರು "ಚಿನ್ನು" ಅಂತ.

ಗುಬ್ಬಚಿ: (ಮುಗುಳ್ನಗೆಯೊಂದಿಗೆ) "ಜಾನು".

ಚಿನ್ನು: ನೀವು ದಿನಾಲು ಈ ಮಾರುಕಟ್ಟೆಗೆ ಬರುತಿರಾ ಅಥವಾ ಹೇಗೆ?

ಜಾನು: ಹೌದು ನಾನು ದಿನಾಲು ಇಲ್ಲಿ ಸುಂದರ ಸುಂದರವಾದ ವರ್ನರಂಜಿತ ಹೂವುಗಳನ್ನು ಕೊಂಡುಕೊಂಡು ಹೋಗಲು ಬರುತ್ತೇನೆ.

ಚಿನ್ನು: ಹೌದಾ

ಜಾನು: ಆಯಿತು ನಾನು ಇನ್ನೂ ನಡೆಯುತ್ತೇನೆ ಮನೆಯಲ್ಲಿ ತಾಯಿ ಕಾಯುತ್ತಾ ಇರುತ್ತಾಳೆ. (ಅಂತಾ ಹೇಳಿ ಹಾರಿ ಹೋಯಿತು)

ಚಿನ್ನು: ಮತ್ತೆ ನಾಳಿ ಭೇಟಿ ಆಗತಿರಾ?

ಜಾನು: ಸ್ವಲ್ಪ ಮುಂದೆ ಹೋಗಿ, ಹಿಂತಿರುಗಿ ಚಿನ್ನುಕಡೆ ..ಎನು ಮಾತನಾಡದೆ ತನ್ನ ಗೊನನ್ನು "ಖಂಡಿತ ಭೇಟಿ ಆಗತೇನಿ" ಅನ್ನು ಹಾಗೆ ಅಳ್ಳಾಡಿಸಿ ತನ್ನ ಮನೆ ಕಡೆಗೆ ಹಾರಿ ಹೋಯಿತು.

ಇದನ್ನು ಕಂಡ ಚಿನ್ನು ಆಗಸದಲ್ಲಿ ಮೋಡಗಳ ಮಧ್ಯೆ ಚಂದಾಮಾಮಾ ತೇಲುವ ಹಾಗೆ ತಾನು ಸಹ ತೇಲಾಡಲು ಶುರು ಮಾಡಿದ.

ಹೀಗೆ ದಿನಾಲು ಎರಡು ಹಕ್ಕಿಗಳು ಮಾರುಕಟ್ಟೆಯಲ್ಲಿ ತಪ್ಪದೇ ಭೇಟಿ ಆಗುತ್ತಾ ಇದ್ದವು. ಪರಿಚಯದಿಂದ ಶುರುವಾದ ಸಂಭಂದ ಈಗ ಪರಿಶುದ್ದ ಪ್ರೀತಿಯಲ್ಲಿ ರೂಪಾಂತರವಾಗಿತ್ತು. ದಿನವಿಡೀ ತಮ್ಮ ಮನಸ್ಸಿನ ಅಂತರಂಗದಾಳದಲ್ಲಿ ಅಧುಮಿ ಕೊಂಡಿರುವ ಭಾವಳೆಗಳನ್ನು ಹಂಚಿಕೊಳ್ಳುತ್ತಾ ಇದ್ದವು, ತಮ್ಮಿಬ್ಬರ ನಡುವಿನ ಪ್ರೀತಿ ದಿನೇ ದಿನೇ ಹೆಚ್ಚು ಆಗಬೇಕೆ ವಿನಹ: ಎಂದೆಂದೂ ಕಡಿಮೆ ಆಗಿರಬಾರದು, ನೂರು ಜನುಮಕು ಹೀಗೆ ಎಂದು ಕೂಡಿ ಇರೋಣ, ನಮ್ಮಿಬ್ಬರ ನಡುವೆ ಕೂದಲು ಸಹ ಹಾದು ಹೋಗಬಾರದಂತಹ ಅಂತರ ವೀರಿಸಿಕೊಳ್ಳೋಣಾ ಎಂದು ಪ್ರತಿಜ್ಞೆ ಕೂಡಾ ಮಾಡಿದ್ದವು.

ಹೀಗೆ ಸಂತೋಷದ ದಿನಗಳನ್ನು ಕಳೆಯುವಾಗ ಒಂದು ದಿನ ಜಾನು ಚಿನ್ನುಗೆ ಹೇಳಿತು ನೀನು ನಮ್ಮ ತಂದೆ/ತಾಯಿ ಹತ್ತಿರ ಬಂದು ನಮ್ಮ ಮದುವೆಯ ಬಗ್ಗೆ ಮಾತಾಡು ಅಂತಾ. ಅದಕ್ಕೆ ಚಿನ್ನು ಆಯಿತು ನಾಳೆ ಬೆಳಿಗ್ಗೆ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿ ತಮ್ಮ ಮನೆಗೆ ಹೋಯಿತು. ಮಾರನೆಯ ದಿನ ಚಿನ್ನು ಜಾನುವಿನ ಮನೆಗೆ ಹೋಯಿತು. ಜಾನುವಿನ ಮನೆ ಮನೆ ನಾ ಅದು ಒಳ್ಳೆ ಮಹಲ ಥರ ಇತ್ತು.. ಆಕಶಗಲಗಿತ್ತಿರುವ ಹೂವಿನ ಮರದ ಮೇಲೆ ದೊಡ್ಡದೊಂದು ರೆಂಬೆಯ ಮೇಲೆ ವಿಶಾಲವಾದ ಹುಲ್ಲಿನಿಂದ ನೇದ ಮನೆ ಅದು. ಮನೆಯ ಸುತ್ತಿಲು ಪರಿಮಳ ಬೀರುತ್ತಿರುವ, ಭಿನ್ನ ಭಿನ್ನವಾದ ರಂಗು ರಂಗಿನ ಹೂವಿನ ಗೊಂಚಲ. ಆಹಾ ನೋಡಲು ಅದು ಒಂದು ರಾಜನ ಅರಮನೆಯೇ ಸರಿ. ಮನೆ ಒಳಗೆ ಹೋದ ಮೇಲೆ ಜಾನುನ ತಂದೆ/ತಾಯಿ ಚಿನ್ನುನನ್ನು ಆಮಂತ್ರಿಸಿದರು. ಹಾಗೆ ಮಾತನಾಡುತ್ತಾ ಚಿನ್ನುನನ್ನು ಅವನ ತಂದೆ/ತಾಯಿ, ಮನೆ, ಮಾಡುವ ಕೆಲಸದ ಬಗ್ಗೆ ಕೇಳಲಾಂಬಿಸಿದರು. ಚಿನ್ನು ನಮ್ಮ ಪರಿವಾರವು ಒಂದು ಮಧ್ಯಂ ವರ್ಗದ ಪರಿವಾರ, ನಾನು ದಿವವಿಡಿ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಕಾಳುಗಳನ್ನು ಶೇಖರಿಸುತ್ತೇನೆ ಮತ್ತು ನಮ್ಮ ತಂದೆ/ತಾಯಿಯವರಿಬ್ಬರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿತು. ಅದಕ್ಕೆ ಜಾನುನ ತಂದೆ ನೋಡಪ್ಪ ನನ್ನ ಮಗಳನ್ನು ನಾನು ತುಂಬಾ ಮುದ್ದಾಗಿ ಬೆಳೆಸಿದ್ದೇನೆ, ಆಕೆಯನ್ನು ನಾನು ಒಂದು ದೊಡ್ಡ ರಾಜಮನೆತನಕ್ಕೇನೆ ಕೊಟ್ಟು ಮದುವೆ ಮಾಡಿಕೊಡಬೇಕೆಂದು ತೀರ್ಮಾನಿಸಿದ್ದೇನೆ ಎಂದು ಹೇಳಿತು. ಅದಕ್ಕೆ ಚಿನ್ನು ನನ್ನ ಮೇಲೆ ಭರವಸೆ ಇಡೀ ನಾನು ಜಾನೂಣನ್ನು ನನ್ನ ಪ್ರಾಣಕ್ಕಿಂತ ಜಾಸ್ತಿನೆ ಪ್ರೀತಿಸುತಿದ್ದೇನೆ ಮತ್ತು ನಾನು ಆಕೆಯನ್ನು ಸುಖವಾಗಿಯೇ ನೋಡಿಕೊಳ್ಳುತೆನೆ ಎಂದೂ ಹೇಳಿತು. ಅದಕ್ಕೆ ಜಾನುನ ತಂದೆ ನೋಡಪ್ಪ ನಿನ್ನ ತಲೆ ಮೇಲೇನೆ ಇರೊಕ್ಕೆ ಒಳ್ಳೇದು ಮನೆ ಇಲ್ಲ ಅಂತಿಯ ಇನ್ನ ನನ್ನ ಮಗಳನ್ನು ಚೆನ್ನಾಗಿ ಹೇಗೆ ನೋಡಿಕೊಳ್ಳುತಿಯಾ ಅಂತ ಕೇಳಿತು. ಚಿನ್ನು, ದಯವಿಟ್ಟು ನನ್ನು ನಂಬಿ ಬೇಕಾದ್ರೆ ಜಾನುನೆ ಕೇಳಿ ನಾವು ಒಬ್ಬರ ನೊಬ್ಬರನ್ನ ಎಷ್ಟು ಪ್ರೀತಿಸುತ್ತಾ ಇದೀವಿ ಅಂತಾ. ಒಮ್ಮೆಲೇ ಜಾನುನ ಕಡೆ ತಿರುಗಿದ ಜಾನುನ ತಂದೆ ಅವನು ಹೇಳೊದೆಲ್ಲ ನಿಜಾನ ಅಂತ ಗಧರಿಸಿ ಕೆಳಿದಾ. ಆಗ ಜಾನು ತನ್ನ ತಲೆಯನ್ನು ತಗ್ಗಿಸಿ ತನ್ನ ಕಾಲ ಬೆರಳುಗಳನ್ನು ನೋಡುತ್ತಾ ಹೌದು ಅಂತ ಹೇಳಿತು. ತಂದೆಗೆ ಬೇರೇನು ದಾರಿ ತೋಚದೆ ಚಿನ್ನುಗೆ ಒಂದು ಷರತ್ತನ್ನು ಹಾಕಿದರು, ನೀನು 3 ತಿಂಗಳಲ್ಲಿ ಒಂದು ಸುಂದರವಾದಂತಹ ಮನೆ ಮತ್ತು ಬರುವ 5 ವರ್ಷಕ್ಕೆ ಆಗುವಷ್ಟು ಆಹಾರವನ್ನು ಶೇಖರಿಸಬೇಕು ಎಂದು ಹೇಳಿತು. ಚಿನ್ನು ಸ್ವಲ್ಪ ಸಮಯ ಯೋಚಿಸಿ, ನನಗೆ ಸ್ವಲ್ಪ ಜಾಸ್ತಿ ಸಮಯ ಕೊಡಿ 3 ತಿಂಗಳು ತುಂಬಾ ಕಡಿಮೆ ಆಗುತ್ತೆ, ನನಗೆ 6 ತಿಂಗಳು ಸಮಯ ಕೊಡಿ ನಾನು ನೀವು ಹೇಳಿದ್ದಾನೆಲ್ಲಾ ಖಂಡಿತವಾಗಿ ಪೂರೈಸುತ್ತೇನೆ ಅಂತ ಕೇಳಿಕೊಂಡಿತು. ಅದಕ್ಕೆ ಜಾನುನ ತಂದೆ ಆಯಿತು ನಿನಗೆ 6 ತಿಂಗಳ ಸಮಯ ಕೊಡತೇನಿ ಅಂತ ಹೇಳಿತು.

ಜಗವನ್ನೇ ಗೆಲ್ಲಲು ಸಿದ್ದವಾದ ಚಿನ್ನುವಿನ ಮನದಲ್ಲಿ ನೂರಾರು ಪ್ರಶ್ನೆಗಳು ಹುಟ್ಟಲು ಶುರುವಾದವು. ಈಗ ನಾನು ಏನು ಮಾಡಲಿ, ಏನು ಮಾಡಿದರೆ 6 ತಿಂಗಳಲ್ಲಿ ನನ್ನ ಗುರಿಯನ್ನು ಸಾಧಿಸುವೇನು ಅಂತಾ ಯೋಚಿಸುತ್ತಾ ಮರಳಿ ಮನೆಗೆ ಬಂತು. ಮನೆಯಲ್ಲಿ ತಾಯಿ ಚಿನ್ನುವಿನ ಮುಖವನ್ನು ನೋಡಿದ ತಕ್ಷಣನೇ ಕೇಳಿತು ಏನಾಯಿತು ಅಂತಾ. ಚಿನ್ನು ಏನು ಇಲ್ಲಾ ಅಮ್ಮ ಅಂತ ಹೇಳಿ ಅಲ್ಲಿಂದ ಕಳಚಿಕೊಳ್ಳಲು ಯತ್ನಿಸಿತು, ಆದರೆ ತಾಯಿಯ ಮುಂದೆ ಮುಚ್ಚಿಡಲು ಆಗದೇ ಕೊನೆಗೆ ತಾನೇ ಎಲ್ಲಾ ವಿಷಯವನ್ನು ಇದ್ದ ಇದ್ದಂಗೆ ಹೇಳಿತು. ಈಗ ನಾನು 6 ತಿಂಗಳಲ್ಲಿ 5 ವರ್ಷಕ್ಕೆ ಆಗುವಷ್ಟು ಕಾಳುಗಳನ್ನು ಶೇಖರಿಸಬೇಕು ಮತ್ತು ಒಂದು ವಿಶಾಲವಾದ ಮನೆಯನ್ನು ಕಟ್ಟಬೇಕೆಂದು ಹೇಳಿತು. ಅದಕ್ಕೆ ತಾಯಿಯ ಕಡೆಯಿಂದ ಪ್ರೋತ್ಸಾಹನೆಯನ್ನು ಕಂಡ ಚಿನ್ನು ಪೆಚ್ಚಿ ಬಿತ್ತು ಮತ್ತು ತಾಯಿಯ ಕಾಲು ಬಿದ್ದು ಆಶೀರ್ವಾದ ತೆಗೆದುಕೊಂಡು ತನ್ನ ಕೊಣೆಗೆ ಹೋಯಿತು. ದಿಟ್ಟ ಮತ್ತು ಅಛಲ ನಿರ್ಧಾರವನ್ನು ಮಾಡಿದ ಚಿನ್ನು ಪ್ರತಿ ದಿನ ಹಗಲು ಇರುಳು ಅನ್ನದೇ ಕಾಳು ಶೇಖರಿಸಲು ಶುರು ಮಾಡಿತು, ಮತ್ತೆ ಒಂದು ಸುಂದರವಾದ ಮನೆಯನ್ನು ಕಟ್ಟಲು ದಿನ 5 ಮೈಲೀ ಹಾರಿ ಹೋಗಿ ಹುಲ್ಲು ಮತ್ತೆ ಮನೆಗೆ ಬೇಕಾದ ಸಾಮಗ್ರಿಗಳನ್ನು ಪಕ್ಕದ ಊರಿನಿಂದ ತರುತಿತ್ತು. ಇದೆಲ್ಲದರಲ್ಲಿ ಚಿನ್ನು ತನ್ನ ಮುದ್ದಿನ, ಜನುಮದ ಗೆಳತಿಯಾದ ಜಾನುನನ್ನು ಅದೇ ಮೊದಲ ಬಾರಿ ಭೇಟಿ ಆದ ಮಾರುಕಟ್ಟೆಯಲ್ಲೀನೇ ಪ್ರತಿ ದಿನವು ಮರಿಯದೇ ಭೇಟಿ ಆಗುತಿತ್ತು. ಭೇಟಿ ಆದಾಗಲೊಮ್ಮೆ ಪ್ರತಿದಿನದ ಚಟುವಟಿಕೆಗಳನ್ನು ಜಾನುನ ಮುಂದೆ ಹೇಳಿಕೊಳ್ಳುತ್ತಾ ಇತ್ತು,ತಮ್ಮ ಮುಂದಿನ ಭವಿಷ್ಯದ ಬಗ್ಗೆ ಕೂಡಾ ಮಾತಾಡುತ್ತಾ ಇದ್ದವು.

ಚಿನ್ನುವಿನ ನಿಷ್ಟೇ ಮತ್ತು ಪರಿಶ್ರಮದ ಫಲದಿಂದ ಅದರ ಗುರಿಯು ತುಂಬಾ ಹತ್ತಿರ ಬಂದಿತು. ಜಾನುನ ತಂದೆ ಹೇಳಿದ ಹಾಗೆ ೫ ವರ್ಷಕ್ಕೆ ಆಗುವಷ್ಟು ಕಾಳುಗಳು, ಒಂದು ಹೊಸದಾದ ಸುಂದರ ಮನೆ ಎಲ್ಲಾ ತಯಾರಾಗಿದ್ದವು.ಇನ್ನೇನು ಕೆಲವೇ ದಿನಗಳು ಉಳಿದಿದ್ದವು ತನ್ನ ಗುರಿಯ ಸಿಹಿಯಾದ ರುಚಿಯನ್ನು ಪಡೆಯಲು.

ಒಂದು ದಿನ ಹಾಗೆ ಚಿನ್ನು ಮಾರುಕಟ್ಟೆಯಲ್ಲಿ ಜಾನುನ ದಾರಿ ಕಾಯುತ್ತಾ ಕುಳಿತಿತ್ತು, 1-2 ನಿಮಿಷ ಆದಮೇಲೆ ಜಾನು ಮಾರುಕಟ್ಟೆಯನ್ನು ಪ್ರವೇಶಿಷಿಸಿತು. ದಿನಂಪ್ರತಿ ಭೇಟಿ ಆಗುವ ಸ್ಥಳಕ್ಕೆ ಜಾನು ಬರುತ್ತಿರುವಾಗ ಒಮ್ಮೆಲೇ ಮೋಡಗಳ ನಡುವಿನಿಂದ ಒಂದು ಹದ್ದು ಬಂದು ಜಾನುನನ್ನು ತನ್ನ ಮುಷ್ಟಿಯಲ್ಲಿ ಬಂಧಿಸಿಕೊಂಡು ಆಕಾಶದಾಚೆಗೆ ಹಾರಿ ಹೋಯಿತು.ಇದನ್ನು ಕಂಡ ಚಿನ್ನುವಿಗೆ ತನ್ನ ಪ್ರಾಣವನ್ನೇ ಯಮನು ಬಂದು ಹರಣ ಮಾಡಿದಂತಾಯಿತು, ಯಾರೋ ಬಂದು ಹೃದಯಕ್ಕೇನೆ ಚೂರಿ ಹಾಕಿ ಕಿತ್ತೆಗೆದಂತಾಯಿತು. ತತಕ್ಷಣ ಚಿನ್ನು ಆ ಕ್ರೂರಿ ಹದ್ದಿನ ಹಿಂದೆ ಹಾರಿತು, ಮನಸ್ಸಿನಲ್ಲಿ ಒಂದೇ ಮಾತು "ಏನೇ ಆದರೂ ಆಗಲಿ ನಾನು ನನ್ನ ಜೀವನದ ಉಸಿರನ್ನು (ಜಾನು) ಮರಳಿ ಪಡೆದುಕೊಳ್ಳುತ್ತೇನೆ", ಮನಸ್ಸಿನಲ್ಲಿ ತಡೆದುಕೊಳ್ಳಲಾರದಷ್ಟು ನೋವನ್ನು ಅನುಭವಿಸುತ್ತಾ ಹದ್ದನ್ನು ಬೆನ್ನಟ್ಟಿ ಮುಗಿಲೇರಿಗೆ ಹಾರಿತು.

ಆ ಹದ್ದು ಮುಗಿಲೆತ್ತರಕ್ಕೆ ಚಾಚಿದ ಬೆಟ್ಟದ ತುದಿಯಲ್ಲಿರುವ ತನ್ನ ಗೂಡಿಗೆ ಜಾನುನನ್ನು ಹಾರಿಸಿಕೊಂಡು ಹೋಗಿ ತನ್ನ ಪುಟಾನಿ ಹದ್ದು ಮರಿಗಳ ಮುಂದೆ ವಗೆದು ಹಾರಿ ಹೋಯಿತು. ಜಾನು ತನ್ನ ಪ್ರಜ್ಞೆಯನ್ನು ಕಳೆದುಕೊಂಡು, ಹಾಗೆ ಆ ಮರಿಗಳ ಮುಂದೆ ಬಲಿಪಶು ಆಗಿ ಬಿದ್ದಿತ್ತು. ತನ್ನ ಮುಂದೆ ಆಹಾರವನ್ನು ಕಂಡು 2 ಮರಿ ಹದ್ದುಗಳು ತಮ್ಮಲಿಯೇ ಕಚ್ಚಾಡಲು ಶುರು ಮಾಡಿದವು. ಅಷ್ಟರಲ್ಲಿಯೇ ಚಿನ್ನು ಆ ಗೂಡಿಗೆ ಹಾರಿ ಬಂತು, ತನ್ನ ಮುಂದೆ ಮರಿ ಹದ್ದುಗಳನ್ನು ಜಾನುಗೋಸ್ಕರ ಕಚ್ಚಾಡುವುದನ್ನು ಕಂಡು ಪೆಚ್ಚಿ ಬಿತ್ತು ಚಿನ್ನು. ಒಂದು ನಿಮಿಷನು ನಿಲ್ಲದೇ ತಕ್ಷಣ ಜಾನುನನ್ನು ತನ್ನ ಕೈಯಲ್ಲಿ ಎತ್ತಿಕೊಂಡು ಆ ಗೂಡಿನಿಂದ ನೆಲಕ್ಕೆ ಹಿಂದೆ ಮುಂದೆ ಯೋಚನೆ ಮಾಡದೇನೆ ಹಾರಿತು. ತನ್ನ ಶರೀರದಲ್ಲಡಗಿರುವ ಶಕ್ತಿಯನ್ನು ಮೀರಿ ತನ್ನ ಪುಟ್ಟ ಪುಟ್ಟ ಪಕ್ಕವನ್ನು ಬಡಿಯತೊಡಗಿತು. ಆದರೆ ಮೊದಲೇ ತನ್ನೆಲ್ಲಾ ಶಕ್ತಿಯನ್ನು ಗೂಡನ್ನು ತಲುಪುವುದರಲ್ಲಿ ಕಳೆದುಕೊಂಡ ಚಿನ್ನು ತುಂಭ ಸಮಯ ಹಾರಾಡಲು ಆಗದೇ ಕೊನೆಗೆ ಜಾನುನನ್ನು ಗಟ್ಟಿಯಾಗಿ ತಬ್ಬಿಕೊಂಡು ಭೂಮಿಯತ್ತ ಉರುಳಲು ಶುರು ಮಾಡಿತು. ಚಿನ್ನು ಜಾನುವಿನ ಕಿವಿಯಲ್ಲಿ ಹೇಳಿತು,...."ಬದುಕಿದರು ನಿನ್ನೊಡನೆ, ಜೀವ ಹೋದರೂ ನಿನ್ನೊಡನೆಯೇ".

ಸೆಕೆಂಡುಗಳಲ್ಲಿ ಚಿನ್ನು ಮತ್ತು ಜಾನು ಭೂಮಿಗೆ ಬಂದು ಅಪ್ಪಳಿಸಿದವು.

ಚಿನ್ನು ಕಣ್ಣ ತೆರೆದು ನೋಡಿದಾಗ ಕಾಣಿತು ತಾವು ಒಂದು ಹೋಗೋಂಚೀಲಿನ ಮೇಲೆ ಆಕಾಶ ಮತ್ತು ಭೂಮಿಯ ಮಧ್ಯೆ ತೇಲಾಡುತ್ತಾ ಇರುವುದನ್ನ. ಜಾನುವಿಗೆ ಇನ್ನು ಪ್ರಜ್ಞೆ ಬಂದಿರಲಿಲ್ಲಾ, ತಾವಿಬ್ಬರು ಸುರಕ್ಷಿತವಾಗಿದ್ದನು ಕಂಡ ಚಿನ್ನು ಖುಷಿಯಿಂದ ಕುಪ್ಪಳಿಸಿತು. ಚಿನ್ನು ಜಾನುವಿನ ಮುಖವನ್ನು ನೋಡುತ್ತಾ ನಿಟ್ಟುಸಿರು ಬಿಟ್ಟು ಹನಿಯ ಮೇಲೆ ಒಂದು ಸಿಹಿಯಾದ ಮುತ್ತನ್ನಿಟ್ಟು ತನ್ನ ಬಾಹು ಬಂಧನದಲ್ಲಿ ತೆಗೆದುಕೊಂಡು ಜಾನುವಿನ ಮನೆಯ ಕಡೆಗೆ ಹೊತ್ತಿಕೊಂಡು ನಡೆಯಿತು. ಸ್ವಲ್ಪ ಸಮಯದ ನಂತರ ಮನೆ ತಲುಪಿದ ಚಿನ್ನು, ಜಾನುವಿನ ತಂದೆ/ತಾಯಿಗೆ ಘಟನೆಯ ಪೂರ್ಣ ವಿವರವನ್ನು ಕೊಟ್ಟಿತು. ಅದನ್ನು ಕೇಳಿದ ಜಾನುವಿನ ತಂದೆ/ತಾಯಿಯ ಕಣ್ಣಲ್ಲಿ ಆನಂದದ ಭಾಷ್ಪಗಳು ಹರಿಯಲಾರಂಭಿಸಿದವು. ನೀನೆ ನಮ್ಮ ಮಗಳಿಗೆ ಸರಿಯಾದ ಜೋಡಿ, ನಿನ್ನಷ್ಟು ಪ್ರೀತಿ ನಮ್ಮಗಳಿಗೆ ಬೇರೆ ಯಾರು ಮಾಡಲು ಸಾಧ್ಯನೆ ಇಲ್ಲಾ ಅಂತ ಹೇಳಿ, ನಮಗೆ ಈ ಮದುವೆ ಒಪ್ಪಿಗೆ ಅಂತ ಹೇಳಿದವು. ಅಷ್ಟರಲ್ಲಿಯೇ ಜಾನುವಿಗೆ ಪ್ರಜ್ಞೆ ವಾಪಸು ಬಂತು. ಜಾನು ಕಣ್ಣ ಬಿಟ್ಟು ನೊಡಿದಾಗ, ಚಿನ್ನುನನ್ನು ಕಂಡು ಕಣ್ಣೀರಿನ ನದಿಯನ್ನೇ ಹರಿಸತೋಡಗಿದಳು. ಚಿನ್ನು ಜಾನುವಿನ ಹತ್ತಿರ ಹೋಗಿ ಜಾನುನ ಕೈಯನ್ನು ತನ್ನ ಕೈಯಲ್ಲಿ ಹಿಡಿದು ಕೊಂಡು, ಕಣ್ಣೀರನ್ನು ತನ್ನ ಕೈಯಿಂದ ವರೆಸಿ ಸಮಾಧಾನ ಹೇಳಿತು.. ಆದ ಘಟನೆಯ ಬಗ್ಗೆ ಮತ್ತು ಅವರ ತಂದೆ/ತಾಯಿ ಹೇಳಿದ ಮಾತುಗಳನ್ನು ಹೇಳಿತು. ಅದನ್ನು ಕೇಳಿದ ಜಾನುವಿಗೆ ಖುಶಿಯ ಟಿಖಾನೇನೆ ಇರಲಿಲ್ಲಾ.

ಎಲ್ಲಾ ಗುರು ಹಿರಿಯರ, ತಂದೆ/ತಾಯಿಗಳ ಆಶಿರ್ವಾದದಿಂದ, ಗೆಳೆಯರ/ಗೆಳತಿಯರ ಪ್ರೀತಿಯಿಂದ ಎರಡು ಗುಬ್ಬಚಿಯ ಮದುವೆಯು ಇದೇ ವರುಷ ಮನೆಯ ಮುಂದೆ ಇರುವ ಒಂದು ದೊಡ್ಡ ಹೂದೋಟದಲ್ಲಿ ಆಗಬೇಕೆಂದು ನಿರ್ಧರಿಸಲಾಗಿದೆ.


ತಮ್ಮ ಸುಖಾಗಮನಾಭಿಲಾಷಿಗಳು,
ಚಿನ್ನು ಮತ್ತು ಜಾನು

1 comment:

Prasad Shetty said...

ಗುಬ್ಬಚ್ಚಿ ಮದುವೆಗೆ ನನ್ನ ಕರಿಯೋದ ಮರಿಬೇಡ ನೋಡ.. ಹಹ್ಹಾಹ್ಹ..