Sunday, February 25, 2007

ನಮ್ಮ ಆನೆಕಲ ಪಯಣದ ಸವಿ ನೆನಪುಗಳು

ನಾವು ಟೋಟಲ ೧೨ ಮಂದಿ ೬ ಬೈಕ ಮ್ಯಾಲ ಆನೆಕಲ (ಇದೂ ಸುಮಾರ ಒಂದ ೬೦ ರಿಂದ ೮೦ ಕೀಲೊ ಮೀಟರ ದೂರ ಐತಿ ಬೆಂಗಳೂರು ದಿಂತ್ರ ತಮಿಳನಾಡು ದಿಕ್ಕನ್ಯಾಗ(ಹೊಸುರ ಕಡೆ))....ಮಸ್ತ ೬ ಬೈಕ ೧೨ ಮಂದಿ ಅತರೊಳಗ ೮ ಡವಗಾಗೋಳ ೪ ಡವಗಿಗೋಳ. ಪುಲ್ಲ ೮೦-೧೦೦ ಸ್ಪಿಡ ನ್ಯಾಗ ಬಾಂವ ಬಾಂವ ಅಂತ ಬೆಂಗಳೂರ - ಹೊಸುರ ರೋಡ ಮ್ಯಾಲಾ ಧೂಳಾ ಆರಿಸಿಕೊಂತ, ಗಾಳಿಗಿನಾ ಸವಾಲ ಹಾಕೂತ್ತಾ, ನೀ ಜಾಸ್ತಿ ರೊ ನಾವ ಜೋರನೊ ಅಂತ ಹೇಳಕೊಂತಾ ಗಾಡಿದ ಎಲ್ಲಾ ತರಹದ ಟೆಸ್ಟಿಂಗ ಮಾಡಿ ಬಿಟ್ಟಿದ್ದೂ ಅವತ್ತ. ಇ ಅನುಭವದ ಸಿಹಿ ನೆನಪುಗಳನ್ನು ಇಗ ನಾನು ನಿಮ್ಮ ಮುಂದೆ ಹಂಚಿಕೊಳ್ಳಲು ಬಯಸುತ್ತಿದ್ದೇನಿ.....

ಹೋದಿರಿ..............

ಹೂಂ ಇನ್ನ ಆ ಮಹಾನ ೧೨ ಶೇಂಗಾ ಮಂದಿ ಯಾರ ಯಾರ ಅಂತ ವಿಚಾರ ಮಾಡಾತೇರಿ, ತಡ್ರಿ ಪರಿಚಯ ಮಾಡತೇನಿ,

೧. ಗಿರಿ ನಾನ (ಶೇಂಗಾಮ್ಯಾನ)
೨. ಸಚಿನ (ಬಾಲಕ)
೩. ರಮೇಶ (ಕಾಕಾ)
೪. ಮಮತಾ (ಕುಸುಮಿ)
೫. ಪಲ್ಲವಿ (ಪಲ್ಲಿ)
೬. ಅಜಯ (ನೊನಸೇಂಸ)
೭. ಬಬಿತಾ (ಬಬ್ಲಿ)
೮. ರವಿ (ರೌಡಿ,ಚಿ)
೯. ರಾಜು (ಮಾಮು)
೧೦. ಸತೀಶ
೧೧. ಸಂತೋಷ
೧೨. ಪದ್ಮಶ್ರೀ (ಪದ್ದು)

ಲಾಸ್ಟಗಿ ನಮ್ಮ ಸೆಕ್ಯುರಿಟಿ ಗಾರ್ಡ (ಗೈಡ) -- ಹೋಳ-ಉಪ್ಪಿನಕಾಯಿ..ಹಿ ಹಿ


ಪ್ಲ್ಯಾಶಬ್ಯಾಕ:

ನಮ್ಮ ಸಾಸ್ಕೇನ್ಯಾಗ ಸೆಕ್ಯುರಿಟಿ ಗಾರ್ಡ ಒಬ್ಬ ಇದ್ದ ಅವನ ಕಡೆಂದ ನಾನ, ಬಾಲಕ, ಕಾಕಾ ಮಿಲಿಟರಿ ಅರಿವಿ ತೋಗೊಂಡಿದ್ದು ಮತ್ತ ಅದನ ಪ್ಯಾಂಟ ಹೊಲಸಾಕಂತ ಮಾಪ ಕೊಡಾಕ ಆನೆಕಲ್ಲಿಗಿ ಬರ್ರಿ ಅಂತ ಸೆಕ್ಯುರಿಟಿ ಗಾರ್ಡ ಹೇಳಿದ್ದಾ. ಆವಾಗ ನನ್ನ ಚಿಕ್ಕ ತೆಲ್ಯಾಗ ಇರೂ ಶೇಂಗಾ ಮಿದಿಳು ಒಂದ ದೊಡ್ಡದ ಪ್ಲಾನ ಹಾಕಾಕ ಶೂರೂ ಮಾಡಿತ. ಯಾಕ ನಾವೇಲ್ಲಾರೂ ಕುಡಿ ಒಂದ ದಿನಾ ಟ್ರಿಪಗಿನಾ ಹೋಗಿ ಬರೊನ ಆನೆಕಲಗಿ ಅಂತಾ...ಮತ್ತೇನ ಶೂರೂ ಆತ ನೋಡ ವಿಚಾರಗೊಳನ್ನ ಸತ್ಯಾ ಮಾಡಾಕ, ಸ್ಟಾರ್ಟ ತೇಲಿ ಹೊಡಸಾಕ, ಏಲ್ಲಾರ್ಣು ಕೇಳಾಕಾ, ಕಾಲ ಬಿದ್ದ ಬಿದ್ದ ಹಾಂ ಹಾಂ ಅನ್ನಸಾಕಾ. ಕೊನೆಗೆ ಎಲ್ಲಾರದೂ ಕೈ ಮುರದ ಮುರದ ಸೊರ್ರಿ ಸೊರ್ರಿ ಮುಗದ ಮುಗದ..ಹಾಂ ಅನಿಸಿದೂ...ಆದ್ರನು ಸ್ವಲ್ಪ ಮಂದಿ ಬರಲಿಲ್ಲಾ ಕಡೆಗನು, ಅದ ಬೇರೆ ವಿಷಯ (ಶಶ್ಯಾ, ಗಂಗನ್ನಾ, ಸಂಗ, ಆಷಾ, ಕಂಚನ, ಯೋ ಮ್ಯಾನ,.....ಮಿಸ್ಸಿಂಗ :-()ಅದ್ರನೂ ಮನಸ ಗಟ್ಟಿ ಮಾಡಿ ಮುಂದವರದು. ಸ್ವಲ್ಪ ಮಂದಿ ಜೈ ಜೈ ಅಂದ್ರ, ನಾನೂ ನಾನೂ ಅಂದ್ರ ಸ್ವಲ್ಪ ಜನಾ...ಮತ್ತೆನ ನಡಿ ವಡಿ ಚಕಡಿ ಅಂತ ನಾನೂ ಶೂರೂ ಮಾಡಿದ್ನೀ. ಆದ್ರ ಇನ್ನೊಂದ ದೊಡ್ಡ ತ್ರಾಸ ಕಾದಿತ್ತ...ಗಾಡಿ ಇರಾಕೀಲ್ಲಾ ಅಶ್ಟ ನಮ್ಮ ಕಡೆ. ಎನ ಮಾಡೂದ ಅಂತ ವಿಚಾರ ಮಾಡಾತಿದ್ದೀವಿ..ಯಾಕ ಅಂದ್ರ ಮದಲ ಮದಲ ಇಲ್ಲಾ ಅಂದಾವ್ರ ಇಗ ನಾನೂ ನಾನೂ ಅನ್ನಾತಿರ್ರ ಹಿ ಹಿ ಹೇಳಿ ಕೇಳಿ ಶೇಂಗಾ/ಡವಗಾ ಮಂದಿ..ಮತ್ತ ಎನ ಎಲ್ಲಾರಿಗೂ ಪೋನ ಹಚ್ಚೂದಾ, ನಿಂದ ಗಾಡಿ ಖಾಲಿ ಐತಿ - ನಿಂದ ಗಾಡಿ ಖಾಲಿ ಐತಿ ಅಂತ ಕೇಳುದಾ, ಇದ್ರ ಬರೆ ಗಾಡಿ ಅಶ್ಟ ಕೋಡ ನೀ ಎನ ಬರಾಕ ಹೋಗಬ್ಯಾಡ ಅನ್ನು ಪರಿಶ್ತಿತಿ ಬಂದಿತ್ತ... ಹಿ ಹಿ..

ಆಮೇಲೆ ಭಾಳ ಗುದ್ಯಾಡಿ ಮ್ಯಾಲ ಒಂದ ಯೋ ಮ್ಯಾನ (ಕಿರಣ) ಗಾಡಿ ಎಬ್ಬಿಸಿದೀವಿ, ಎರಡ ಗಾಡಿ ಸಂತೊಷಂದ ಎಬ್ಬಿಸಿದೀವಿ...ಇಗ ನಂದ, ಕಾಕಾ, ಬಾಲಕ, ಮತ್ತ ೩ ಗಾಡಿ ಆಗಿ ಸೇರಿ ೬ ಆದೂ....ಉಸಿರಾಗ ಉಸಿರ ಬಂದಂಗ ಆತ...

ಮತ್ತೇನ ಇನ್ನೆನ ಹಿಂದ ಹೊಳ್ಳಿ ನೊಡಲೀಲ್ಲಾ ನಾವ ಏನ....ರೈ ರೈ..ಹಲ್ಯಾ ಹಲ್ಯಾ ಅಂತ ಶೂರೂ ಆತಾ ನೋಡ ನಮ್ಮ ಆನೆಕಲದ ಪ್ರವಾಸ!!!!!!!!!!

ಪ್ಲಾನ: ಎಲ್ಲಾರೂ ನವರಂಗದಿಂತ ಕೋರಮಂಗಲ ರಿಂಗ ರೋಡ..ಅಲ್ಲಿಂದ ಕರ್ರಿ ಲಿಪ ಹೋಟೆಲ. ಇಲ್ಲಿ ನಾಸ್ಟಾ ಮಾಡೂದಾ. ಇದ ಆದ ಮ್ಯಾಲ ಅಲ್ಲಿಂದ ಹೊಸುರ ರೋಡ... ಹೊಸುರ ಆದ ಮ್ಯಾಲ ಸ್ವಲ್ಪ ಮುಂದ ಹೋಗಿ ರೈಟ ಟರ್ನ ತೋಗೊದು ಇತ್ತ. ಏಲ್ಲಾರಿಗೂ ವಾರ್ನಿಂಗ!!! ಕುಡಿ ಹೋಗೂದಾ ಅಂತ, ಜಾಸ್ತಿ ಮಂಗ್ಯಾನ ಆಟಾ ಮಾಡಾಂಗಿಲ್ಲಾ ಅಂತ.

ಎಲ್ಲಾರಿಗೂ ಮದಲಾ ಹೇಳಿತ್ತಾ: ಮಸ್ತ್ ಪೈಕಿ ಜಿನ್ಸ, ಪುಲ್ಲ ಸ್ಲಿವ ಶರ್‍ಟ (ಹುಡಗೊರಗಿ), ಟೋಪ ಅಥವಾ ಟಿ-ಶರ್‍ಟ (ಹುಡಗ್ಯಾರಿಗಿ), ಬೂಟ ಮಸ್ಟ ಇರಬೇಕಂತ..ಮಸ್ತ ಪೈಕಿ ಬೀಸಲಾ ಇರತೇತಿ, ಜಂಗಲನ್ಯಾಗ ಗಿಡ ಗಂಟಿಗೋಳ ಇರತಾವಾ ಅದರಾಗಿಂದ ಹೊಗೊದ ಐತಿ ಅದಕ್ಕ ಎಲ್ಲಾ ಮೇಲಿನ ವಸ್ತುಗಳು ಬೇಕಾ ಅಂತಾ ಹೇಳಿತ್ತಾ....

ಎಲ್ಲಾರ್ನು ಗೋಳೆ ಮಾಡುದ ಬೆಳಿಗ್ಗೆ ಬೆಳಿಗ್ಗೆ ಅಂದ್ರ ದೊಡ್ದ ತ್ರಾಸದ ಕೆಲಸಾಪಾ...ಓಂದ ಕುರಿ ಬ್ಯಾ ಅಂತ ಅಂದ್ರ ಇನ್ನೊಂದ ಮ್ಯಾ ಅಂದ ಬಿಟ್ಟಿರತೇತಿ, ಒಬ್ಬ ಇನ್ನ ಹಾಸಿಗ್ಯಾಂಗಿತ್ರ ಎದ್ದಿರಾಂಗಿಲ್ಲಾ, ಇನೋಬ್ಬ ಇನ್ನ ಟೊಯಲೇಟ ನ್ಯಾಗ ಹೋಗಿ ಕುಂತಿರತಾನಾ, ಒಬ್ಬಾಕೀ ಇನ್ನ ಮೇಕಪ ಮಾಡಾಕಾ ಶೂರೂ ಮಾಡಿರತಾಳಾ, ಇನ್ನೋಬ್ಬಾಕಿ ಆತೋ ಇನ್ನ ಇಲ್ಲೋ ನಿಂದ ಅಂತ ಬರೇ ನನ್ನ ಬಯ್ಯಕೊಂತ ಕುಂತಿರತಾಳಾ ಹಿ ಹಿ ಹೆಸರ ಎನ ಹೇಳಾಂಗಿಲ್ಲಾ ಅವರದ ಇಲ್ಲಾ ಅಂದ್ರ ನನ್ನ ಗತಿ ಅದೋ ಗತಿ...ಶೀವನೆ ಶಂಭೊಲಿಂಗಾ.. ಆಗಿ ಬಿಡತೇತಿ. ಆದ್ರನೂ ಇ ಸಲಾ ಎಲ್ಲಾ ಸರಿಯಾಗಿ ಟೈಮ ಗಿನಾ ಆಗಿತ್ತಾ..ದೇವರ ದಯೆ ನಮ್ಮ ದೊಡ್ಡವ್ರದ ದಯೆ. ....ನಮ್ಮ ಆನೆಕಲದ ಪಯಣ, ಬೆಳಿಗ್ಗೆ ೭ ಗಂಟೆಗೆ ನವರಂಗ ವೃತ್ತದಿಂತ ಶೂರೂ ಆಯ್ತ....ಆಮೇಲೆ ಮುಂದ ಕೋರಮಂಗಲಕ್ಕ ಹೋಗಿ ಗಾಡಿ ನಿಂತಿತಾ, ಮಸ್ತ ಪೈಕಿ ನಾಸ್ಟಾ ಮಾಡಿದು ಕರ್ರಿ ಲಿಪ ನ್ಯಾಗ....ಸಾದಾ ಹಾಂವಾಗಿ ಎಲ್ಲಾರೂ ಮುಂದ ನಡದೂ...

ಆದ್ರ ಇನ್ನ ಶೂರೂನೂ ಮಾಡಿರಾಕಿಲ್ಲಾ ಮಂಗ್ಯಾನ ಆಟಾ ಸ್ಟಾರ್ಟ ಆಗಿತ್ತ ಅಲ್ಲಿ ಹಿಂದ, ನೊಡಿರ್ರ ವಡಗಾಂವಿ ರವ್ಯಾ ಪತ್ತೆ ಇಲ್ಲಾ, ನಾವ ಎಲ್ಲಾರೂ ಪೆಟ್ರೊಲ ಹಾಕಸಾಕಂತ ನಿತ್ತೇವಿ ಮಡಿವಾಳ ಕಡೆ ಇಂವಾ ಕಾನಸವಾಲ್ಲ... ಮತ್ತ ಪೋನ ಮಾಡಿ ಇಲ್ಲಿ ಬಾ ಅಲ್ಲಿ ಬಾ ಅಂತ ಹೇಳಿದು ಯಾಕಂದ್ರ ಹುಡುಗ ಬೆಂಗಳೂರಿಗಿ ಅವಾಗಾ ಅವಾಗ ಬಂದಿದ್ದ, ಹೊಸಬ ರೋಡ ಸರಿಯಾಗಿ ಗೊತ್ತಿಲ್ಲಾ..ಆಮೇಲಿ ಒಂದ ೧೫ ನಿಮಿಷ ಆದ ಮ್ಯಾಲ ಬಂದಲಾ ಚಿ..ಹಂಗ ಒಬ್ಬಬ್ರ ಆಗಿ ಎಲ್ಲಾರೂ ಬರಾಕ ಸೂರೂ ಮಾಡಿರ್ರಪಾ....ಆತ ಮತ್ತ ಇನ್ನೊಂದ ಸಲಾ ದೊಡ್ಡದ ಒಂದ ವಾರ್ನಿಂಗ ಎಲ್ಲಾರಿಗೂ ಇಗಾರ ಸುದರರ್ಸಲೇ...ಬಿಡ್ರಿ ಅದ ಮಂಗ್ಯಾನ ಆಟಾನಾ....ಅಂತ ಹೇಳಿತಾ

ಆಮೇಲೆ ಹೇಳಿದು ಎಲ್ಲಾರು ಇಲ್ಲಿ ಬಿಟ್ಟು ಅಂದ್ರ ಮುಂದ ಟರ್ನಿಂಗನ ಪಾಯಿಂಟ ಗಿನಾ ಸಿಗುನಾ ಅಂತಾ, ಅದ ಆದ ಮ್ಯಾಲೆ ಸಿದಾ ಆನೆಕಲನ ಸ್ಟೊಪ...ಇಶ್ಟ ಹೇಳಿ ಶೂರೂ ಮಾಡಿದೂ ನೋಡ ನಮ್ಮ ಜೀವನದ ಮರೆಯಲಾಗದ ಬೈಕ ರೈಡನಾ....

ಕಾಕಾ ಇ ಟ್ರಿಪ ಸಮಂದ ತನ್ನಾ ಹೆಲ್ಮೆಟನ್ನ ತಯಾರ ಮಾಡಿದ್ದ (ಹಾಂ ಹಾಂ ಅದ ಹೇಲ್ಮೆಟಪಾ ಅತರ ಮ್ಯಾಲ ೧ ಕೇ.ಜಿ ಧೂಳಾ ಕುಂತಿದ್ದ, ಹಾಂ ಹಾಂ ಅದಾ ಅದರ ಮ್ಯಾಲ ಜೊಂಡಗ್ಯಾ ಸದೆಕ ಅಡ್ಯಾಡಾಕ ಹೇದರತಿತ್ತಾ, ಹಿ ಹಿ ಭಾಳ ಆತಾ...) ಆದ್ರ ಲಾಸ್ಟಗಿ ಅದನ್ನ ತೊಗೊಂಡ ಬರಲೆ ಇಲ್ಲಾ ಚೆ ಚೆ....ಪುಲ್ಲ ಎಲ್ಲಾರೂ ಮನಗಂಡ ತಯಾರ ಆಗಿ ಬಂದಿರ್ರ (ಎನೋ ಅದ ಏನ ಟ್ರೆಕ್ಕಿಂಗಿ ಬಂದಿರ್ರೊ ಎನ ಪಾರ್ಕನ್ಯಾಗಾ ಕುಂಡ್ರಾಕೊ...) ಎಷ್ಟ ಹೇಳಿರೂ ಸ್ವಲ್ಪ ಹುಡಗೊರ ವಿತೌಟ ಜಿನ್ಸ್, ಪುಲ್ಲ್ ಸ್ಲಿವ ಶರ್‍ಟ, ಬಂದಿರ್ರ ಮತ್ತ ಹುಡಗ್ಯಾರನು ಎನ ಕಡಿಮಿ ಇಲ್ಲಾ ಅವರೂ ಅವರಾ. ಎನ ಮಾಡಾಕ ಆಗತೇತಿ ಪಕ್ಕಾ ಡವಗಾ ಗ್ಯಾಂಗಲಾ....ನನ್ನು ಹಿಡ್ಕೊಂಡನ್ನ ಯಾಕ ಅಂದ್ರಾ ನಾನು ಹಾಪ ಸ್ಲಿವ ಟಿ-ಶರ್‍ಟ ಹಾಕೋಂಡಿದ್ದಿನಿ..(ಆಚಾರ ಹೇಳಾವ್ರ ಮದಲ ಬದನಿಕಾಯಿ (ಹಾಂ ಬದನಿಕಾಯಿ ಇಇಇಇಇ ಬಾಯಾಗ ನೀರ ಬಂದು ನನಗ ಇದರ ಹೆಸರ ಕೇಳಿ)...ತಿನ್ನತಾರ ಅಂತ..

ನಮ್ಮ ಬಾಲಕ ಮದಲನಾ ಭಾಳ ಪ್ರಸಿದ್ದಿ ಪಡೆದುಕೋಂಡಿದ್ದಾ ಬೈಕ ರ್‍ಯಾಶಾಗಿ ಹೋಡಿತಾನ ಅಂತ, ಸೊ ಮದಲ ಮದಲ ಅವನ ಹಿಂದ ಕುಂಡ್ರಾಕ್ಕ ಭಾಳ ಹೆದರಾತಿರ್ರ ಆದ್ರ ನಮ್ಮ ಡೇರ ಡೇವಿಲ ಪಲ್ಲಿ_ಗುಲ್ಲಿ ಗಟ್ಟಿ ಮನಸ ಮಾಡಿ ಕುಂತ ಬಿಟ್ಟಳಾ....ನನ್ನ ಹಿಂದ ನನ್ನ ಚೇಲಿ ಕುಸುಮಿ ಕುಂತಳ. ಮತ್ತ ಅಕಿ ಕಡೆ ಕ್ಯಾಮೇರಾ ಕೊಟ್ಟಬಿಟ್ಟಿನ್ನಿ ನಾನಂತಿ...ಮತ್ತ ಸ್ಪೇಶಲ ವಾರ್ನಿಂಗನು ಕೊಟ್ಟಿತ್ತಾ ಪೊಟೊ ಮಸ್ತ ಬರಬೇಕಂತ...

ಮಸ್ತ ಎಲ್ಲಾರೂ ಬಾಂವ ಬಾಂವ ಅಂತ ಬೈಕ ಒಡಿಸಿರ್ರ ಆನೆಕಲ ಮುಟ್ಟಿದಿವಿ ಜಲ್ದಿನಾ. ನಮ್ಮ ಗೈಡ ಕಮ ಸೆಕ್ಯುರಿಟಿಗಿ ಫೋನ ಮಾಡಿ ಕರದೂ ಮತ್ತ ಮದಲ ಟೇಲರ ಕಡೆ ಹೊದು. ನಾನ, ಬಾಲಕ, ಕಾಕಾ ಮಾಪ ಕೊಟ್ಟು ಪ್ಯಾಂಟದ. ಆಮೇಲೆ ಎಲ್ಲಾರದೂ ಕುಡಿ ಒಂದ ಪೊಟೊ ಸೇಸನ ಆತ ಅಲ್ಯಾ...



ಆಮೇಲೆ ನಮ್ಮ ಗೈಡ ಹೇಳಿದಾ ಇಲ್ಯಾ ಊಟಾ ಕಟ್ಟಕೋಂಡ ಹೋಗಬೇಕಂತ ಅಲ್ಲಿ ಎನು ಸಿಗಾಂಗಿಲ್ಲಾ ಅಂತ. ಆಯಿತಾ ಅಂತ ಹೇಳಿ ಎಲ್ಲಾರೂ ಗಾಡಿ ತಗದು ಹೋಟೆಲ ಕಡೆ ಹೋದು. ಅಲ್ಲಿ ಚಪಾತಿ ಮತ್ತ ಭಾಜಿ ಕಟ್ಟಗೊಂಡ ನಮ್ಮ ಪಯನದತ್ತ ನಡದು.

ಮಸ್ತ ಬೈಕ ರೈಡ ಮಾಡಕೋಂತ ಬಾಂವ ಬಾಂವ ಅಂತ ನಾ ಮುಂದ ನಿ ಮುಂದ ಅಂತ ಸ್ಪರ್ಧೆ ನ ಸ್ಪರ್ಧೆ....ಅತರಾಗ ನಮ್ಮ ಗೈಡ ವಾರ್ನಿಂಗ ಕೊಟ್ಟ ಕೊಟ್ಟ ಬ್ಯಾಸರ ಆದ. ಲಾಸ್ಟ ಲಾಸ್ಟಗಿ ಅಂತು ಅವಾಂ ಗೋಳ್ಳ ವಗ್ಯಾಕ ಸೂರೂ ಮಾಡಿದಾ..ಎನ ಅಂದ್ರ ಇಲ್ಲಿ ಕಾಡ ಆನೆಗೋಳ ಅದಾವಾ ರೋಡ ನಡಕನ ಬಂದ ಬಿಡತಾವಾ. ಎಚ್ಚರಿಕೆಯಿಂದ ಗಾಡಿ ಸ್ಲೊವ ಹೋಡಿರಿ ಅಂತಾ....




ಆದ್ರ ಗೊತ್ತಲಾ ನಮ್ಮ ಶೇಂಗಾ ಮಂದಿ ಎನ ಪರಕನು ಇಲ್ಲಾ ಮಂಚನು ಇಲ್ಲ (ಪರ್‍ಕ ಮತ್ತು ಮಂಚ ಚೊಕೊಲೆಟ)..ತಮ್ಮ ಶೇಂಗಾಗಿರಿನ್ನ ಮಾಡಕೊಂತ ನಡದಿರ್ರಾ....ಲಾಸ್ಟಗಿ ಅವನಿಗೆ ಇಶ್ಟ ಸಿಟ್ಟ ಬಂತಲಾ ಅಂತಿ ಮುಗಿತಾ ಬೈದ ಬಿಟ್ಟಾ ಅವಾಂ, ಎನ ಡವಗಾ ಮಂದಿನೊ ಅಂತಾ....ಹಿ ಹಿ...ಅದ ಆದ ಮ್ಯಾಲೆ ನಂದಾ ನೊನಸೆಂಸಂದಾ ಮಾತಿನ ಚಕಮಕಿನು ಆತಾ....ಸ್ವಲ್ಪ ನಾನು ಸಿಟ್ಟ ಆಗಿನ್ನಿ ಮತ್ತ ಹೇಳಿನಿ ಅವಂಗಾ ಎಲ್ಲರು ಕುಡಿ ನಡಿರಿಪಾ ಅಂತ...ಎಲ್ಲಾರೂ ಪೂರ್‍ತಿ ಘಾಭ್ರಿ ಆದ್ರ ಎನ ಶೇಂಗಾಮ್ಯಾನ ಸಿರಿಯಸ ಆಗ್ಯಾನಲಾ ಅಂತಾ......ಕುಸುಮಿ ಅಂತಿ ಒಂದ ೧೦೦ ಸಲಾ ಕೇಳಿದ್ದಾ ಕೇಳಿದ್ದಾ ನೀ ಸಿರಿಯಸ ಆಗಿದ್ದಿ ಎನಿಲ್ಲಾ ಅಂತ, ನೀ ಸಿರಿಯಸ ಆಗಿದ್ದಿ ಎನಿಲ್ಲಾ ಅಂತ..ಹಿ ಹಿ.
ಆದ್ರ ನಾನ ಸ್ವಲ್ಪ ಸಿರಿಯಸ ಆಗಿನ್ನಿ ಆದ್ರ ಅಶ್ಟೂನು ಅಲ್ಲಾ...

ಆಟಲಾಸ್ಟ ನಮ್ಮ ಗುರಿ ಮುಟ್ಟಿದೂ ಮದ್ಯಾನ ರಣಾ ರಣಾ ಬಿಸಿಲ ನ್ಯಾಗಾ...



ನನ್ನ ಗಾಡಿ ಪಾರ್ಕ ಅಲ್ಯ ರೋಡ ಸೈಡಗಿ ಮಾಡಿನಿ..ವಳ್ಳಿ ನೋಡಿನಿ..ಮಸ್ತಪೈಕಿ ಒಂದ ವಿಶಾಲವಾದ ಪರ್ವತ ಮ್ಯಾಲೆ ನಾವ ನಿಂತೇವಿ ನಮ್ಮ ಮುಂದ ಇನ್ನೋಂದ ಪರ್ವತ. ಎರಡರದು ನಡಕ ಇಳಿಜಾರು. ನಾವೆಲ್ಲಾರೂ ಇ ನಿಂತ ಪರ್ವತ ಮ್ಯಾಲಿಂದ ಕೆಳಗಡೆ ಇಳಿದಾ ಕಾಡವಳಗ ಹೋಗಬೆಕಾಗಿತ್ತಾ.....ಅದು ಅಶ್ಟ ಪುಲ್ಲ ಕಾಡನು ಅಲ್ಲಾ, ಆ ಪರಿ ದೊಡ್ಡು ದೊಡ್ಡು ಗಿಡಗೋಳ ಇರಾಕಿಲ್ಲಾ ಆದ್ರ ಪೂರ್‍ತಿ ಸನ್ನ ಸನ್ನ ಗಿಡಗೋಳ ಎಲ್ಲಾ ಕಡೆ ಹಬ್ಬಿ ಬೇಳದ ಬಿಟ್ಟಿದ್ದು...ಎನೋ ಅನ್ನರಿ ಖರೆ ಟ್ರೆಕ್ಕಿಂಗ ಮಾಡಾಕ ಸರಿಯಾದ ಜಾಗಾ ಅದೂ....ನಮ್ಮ ಗೈಡ ಹೇಳಿದಾ ರೋಡಸೈಡ ಗಾಡಿ ಪಾರ್ಕ ಮಾಡೂದ ಸರಿ ಅಲ್ಲಾ, ಅದಕ್ಕಾ ನಡು ಹೋಲದಾಗ ಒಂದ ಮನಿಯಿತ್ತಾ ಅಲ್ಲಿ ಪಾರ್ಕ ಮಾಡೂನಾ ಅಂತ ಹೇಳಿದಾ. ನಾವು ಎಲ್ಲಾರು ಆಯಿತ ಅಂತ ಹೇಳಿ ಗಾಡಿ ಹೋಲದಾಗ ಹಾಕಿದಿವಿ ಗರ್ರ ಗರ್ರ ಅಂತ ಇಳದು...ಒಂದ ಕಡೆ ಎಲ್ಲಾರು ಪಾರ್ಕ ಮಾಡಿದೂ. ಅಲ್ಲಿ ಕೈಯಲ್ಲಿ ಎನುಸು ಅಶ್ಟ ಮನಿಗೋಳ ಇದ್ದು...ಪಕ್ಕಾ ಬುಡಗಟ್ಟು ಜನಾಂಗದವ್ರ ಇದ್ರ, ಅದ ಹಳೆ ಶೈಲಿ ಮನಿಗೋಳಾ. ನಾವೆಲ್ಲಾರು ಕೂಡಿ ಹಂತಾದನ ಮನಿ ಕಡೆ ಹೋದು, ಮತ್ತ ಊಟದ್ದ, ನೀರಿಂದ ಬ್ಯಾಗಗೋಳನ್ನ ಬಿಟ್ಟ ಎಲ್ಲಾ ಬಾಕಿ ವಸ್ತುಗೋಳನ್ನ ಅದ ಮನ್ಯಾಗ ಇಟ್ಟು. ಯಾಕ ಅಂದ್ರ ಮದಲಾ ಬಿಸಿಲ ಭಾಳ ಇತ್ತ ಮತ್ತ ಅಷ್ಟ ವಜ್ಜೆದ್ದ ಸಾಮಾನಗೋಳನ್ನ ತೋಗೊಂಡ ಹೋಗೂದಾ ಉಪಯೋಗಕ್ಕ ಬರತಿರಾಕಿಲ್ಲಾ.

ಆ ಮನ್ಯಾಗ ಒಂದ ಪುಟ್ಟ ಪುಟಾನಿ ಇದ್ದಳ..ಮುಗ್ದತೆ ತುಂಬಿಕೋಂಡಿರುವ ಆ ಪುಟಾನಿಯ ಮೋಗವು...ಆಹಾ....ಮನಮೋಹಕವಾಗಿತ್ತು. ಬಡತನದ ಬದುಕು ಹೇಂಗ ಇರತೇತಿ ಅಂತ ಅಕಿನ್ನ ಮೋಗದ ಮೇಲೆ, ಆಕೆ ಹಾಕೋಂಡಿರುವ ಅರಿವಿ ಮ್ಯಾಲ ಗೊತ್ತಾಗಾತಿತ್ತ...ಪ್ರಪಂಚದ ಧ್ಯಾನ ಇರದ ಪುಟಾನಿ ನಾವು ಕ್ಯಾಮರಾ ದಿಂತ ಚಿತ್ರ ತಗ್ಯಾಕ ಶುರು ಮಾಡಿಮ್ಯಾಲ ತನ್ನದೆ ಆದ ವಿಷಿಶ್ಟ ಶೈಲಿಯಲ್ಲಿ ಮುಗುಳ್ನಗೆಯನ್ನು ಕೊಟ್ಟಳು.

ಮೇಲೆ ನಮ್ಮ ಪದಯಾತ್ರೆಯನ್ನು ಶೂರು ಮಾಡಿದ್ವಿ...ನಮ್ಮ ಗೈಡ ಪಕ್ಕಾ ಸುಳ್ಳರ ಸರದಾರಾ ನಮಗ ಎನೇನೊ ಕಟ್ಟ ಕತಿಗೋಳ ಹೇಳಕೊಂತ ವಂಟಿದ್ದಾ, ನಡು ಹಾದ್ಯಗೆಲ್ಲಾ ನಮಗೇಲ್ಲಾ ಹೆದರಸಾತಿದ್ದಾ ಇಲ್ಲಿ ಆನೆಗೋಳ ಅದಾವಾ, ಕಾಡ ಪ್ರಾಣಿಗೋಳ ಅದಾವಾ ಅಂತ...ಮದಲ ಮದಲ ಅಂತಿ ಎಲ್ಲಾರು ಎನ ಸುಳ್ಳ ಹೇಳತಾನಾ ಅಂತಾ ಮಜಾಕ ಉಡಾಸಾತಿದ್ರ...ಒಂದ ಕುರಿ, ಆಡಾ ನೊಡಿರ್ರ ಹುಲಿ ಬಂತಾ ಆನಿ ಬಂತಾ ಅಂತಾ ನಗೆಹನಿ ಮಾಡಾತಿರ್ರಾ ಎಲ್ಲಾರು..ಆದ್ರ ಒಮ್ಮೆ ಕಾಡವಳಗ ಹೋದ ಮ್ಯಾಲೆ...ನಾವ ಖರೆನಾ ಆನಿ ಕಾಲಿನ ಪದ ಚಿನ್ಹೆಗಳನ್ನು ನೋಡಿದು...

ನಾ ಅಂತಿ ಪುಲ್ಲ ಖುಶ....ಪಿಚರ್ರ ತಗದಿದ್ದಾ ತಗದಿದ್ದಾ..



ಪೂರತಿ ಇಳಜಾರ ಇತ್ತಾ ನಾವ ಹೋಗು ದಾರಿ..ಹೋಗಬೇಕಂದ್ರನ ಒಬ್ಬ ಒಬ್ಬರ ಬಿಳ್ಳಾಕ ಸುರು ಮಾಡಿರ್ರ ನೋಡ...ಕುಸುಮಿ, ಪಲ್ಲಿ, ನೊನಸೆಂಸ ನಾನ ಎಲ್ಲಾರು ಒಂದ ಒಂದ ಸಲಾ ಬಿದ್ದೂ....ಭಾಳ ಮಜಾ ಬರಾತಿತ್ತ ನನಗ ಅಂತಿ...ಪರ್ರ ಪರ್ರ ಅಂತ ಜಾರಿ ಬಿಳ್ಳಾತಿರ್ರ ಎಲ್ಲಾರು...ಹಿ ಹಿ. ಎಲ್ಲಾರು ಒಂದೊಂದ ಕಟ್ಟಿಗೆ (ಕೋಲು) ಹಿಡ್ಕೊಂಡಿರ್ರಾ ಎನಪಾ ಎನು ಮೌಂಟ ಎವರೆಸ್ಟ ಹತ್ತಾವ್ರ ಗತೆ... ಅರಾಮಸೇ ಇಳಕೊಂತ ಒಂದ ಮಸ್ತ ಪೈಕಿ ಕೊಳ್ಳದ ಕಡೆ ಕರ್ಕೊಂಡ ಹೋದ ನಮನ್ನೇಲ್ಲಾ ನಮ್ಮ ಗೈಡ, ಅಲ್ಲಿ ಎಲ್ಲಾ ಪ್ರಾಣಿಗೋಳ ನೀರ ಕುಡ್ಯಾಕ ಬರತಾವ ಅಂತ ಹೇಳಿದಾ, ಸ್ವಲ್ಪ ಮಂದಿ ಅದಕ್ಕ ನಕ್ರ, ಸ್ವಲ್ಪ ಮಂದಿ ಸಿರಿಯಸ ಆಗಿ ತೋಗೊಂಡ್ರ. ಎಲ್ಲಾರು ಅಲ್ಯನಾ ಸ್ವಲ್ಪ ಟೈಮ ಪಾಸ ಮಾಡುನಾ ಅಂದ್ರ...




ಆ ಕೊಳ್ಳದ ನೀರ ಮಸ್ತ ತಿಳಿ ಅಂದ್ರ ತಿಳಿ ನೀರ ಇದ್ದು, ಭಾಳಾ ಸನ್ನದ ಅದ ಕೊಳ್ಳ..೩ ಕಡೆಂದನು ಕಪ್ಪು ಕಲ್ಲ ಸುತ್ತ ವರದಿದ್ದು ನಡಕ ಚಕಮಕ ಅಂತ ಹೊಳಿಯುವ ನಿಂತ ನೀರು...ಸುರ್ಯನ ಕಿರಣ, ತಿಳಿ ನೀರನ್ನ ಛೀರಕೋಂತ ತಳಾ ಮುಟ್ಟಾತಿತ್ತ... ಅದರಾಗ ಒಂದ ಕಪ್ಪಿ ಇತ್ತ ನಾ ಅದರ್ರ ಪೊಟೊ ತೆಗ್ಯಾಕ ಸುರು ಮಾಡಿನಿ...ಬಾಕಿ ಜನಾ ನಿರೋಳಗ ಇಳ್ಯಾಕ ಸುರು ಮಾಡಿರ್ರ...ಒಬ್ಬ ಒಬ್ರ ಅಂತ ಎಲ್ಲಾರು ಇಳುದು....ನೀರಾಗ ಡುಬುಕಿ ವಡ್ಯಾಕ ಶೂರೂ ಮಾಡಿದು. ಯಾರ ಇಳಿಲಿಲ್ಲಾ ಅವರ ಮ್ಯಾಲೆ ನೀರ ಗ್ವಜ್ಜಿದ್ದಾ ಗ್ವಜ್ಜಿದ್ದ....ಕಾಕನ್ನ ಒಂದ ಸಲಾ ನೀರಿನ್ಯಾಗ ಹಾಕ್ಕಿ ಮುಳಿಗಿಸಿತಾ...ಆಮೇಲೆ ಬಬ್ಲಿ ಬಾರಿ.

ಎಲ್ಲಾರು ವಟ್ಟ ಕುಡಿ ನೀರಾಗ ಇಳದು....ಆಶ್ಚರ್ಯದ ವಿಷಯ ಅಂದ್ರ ನಮ್ಮ ಡುಮ್ಮಿ ಪಲ್ಲಿ_ಗುಲ್ಲಿ ಒಮ್ಮೆ ಬಂದಾಕಿನ ನೀರಾಗ ಇಳದ ಈಜಾಡಾಕ ಶುರು ಮಾಡಿಳ....ಎಲ್ಲಾರು ಗಾಭರಿ ಆಗಿ ಬಿಟ್ರ (ಎಲ್ಲಾ ನೀರ ವರಗ ಬಂದ ಗಿಂದಾವ ಅಂತ..ಹಿ ಹಿ)..ಎಲ್ಲಾರು ಮಸ್ತ ಮಜಾ ಮಾಡಿದು ನೀರಾಗ ಈಜಾಡಿ, ಕುಣಿದಾಡಿ, ಚಿರ್‍ಯಾಡಿ, ನೀರ ಗೊಜ್ಯಾಡಿ..ಹಿ ಹಿ.

ಮಸ್ತ ತಿಳಿ ನೀರ ಇದ್ದಿದ್ದ ಕೊಳ್ಳನ್ನ ಇಷ್ಟ ಕೆಡಿಸಿ ಬಂದ್ರಲ್ಲಾ ಅಲ್ಲಿ ಯಾವ ಪ್ರಾಣಿನು ನೀರು ಕುಡ್ಯಾಕ ಹೊಗಿರಬಾರದ ಹಂಗ ಮಾಡಿರ...ಹಾ ಹಾ.

ಇಶ್ಟೆಲ್ಲಾ ಆಟಾ ಆಡಿ ಮ್ಯಾಲಾ ಎಲ್ಲಾರಿಗು ಹಸೀವು ಆತ....ಬ್ಯಾಗ ಚೇಕ ಮಾಡಿರ್ರ ಗೊತ್ತ ಆತಾ ಊಟದ್ದ ಬ್ಯಾಗ ಅಲ್ಲೆ ಮನ್ಯಾಗ ಬಿಟ್ಟ ಬಂದೇವಿ ಅಂತ..ಎಪ್ಪಾ ಆಮೇಲೆ ಎನ ಹಂಗಾ ಹೊಟ್ಟಿ ಹುರಿಸಿಕೋಂತ ಬೆಟ್ಟ ಹತ್ತಾಕ ಶುರು ಮಾಡಿದು..ಎಲ್ಲಿ ನಮ್ಮು ವಸ್ತುಗೊಳನ್ನ ಇಟ್ಟಿದ್ದು ಆ ಮನಿಗಿ ಕಡೆ ಬೆಟ್ಟ ಹತ್ತಿ ಹೋರಟು..

ಬರಬೇಕಾದ್ರ ನಾವು ಒಂದು ಹಳ್ಳಿ ಮನೆ ಕಡೆಂದ ಬರತಿದ್ದು. ಅಲ್ಲಿ ಓಂದು ಪುಟ್ಟ ಆಡಿನ ಮರಿ ಇತ್ತ. ಅದನ್ನ ಬಬ್ಲಿ ನೊಡಿದ್ದಾಕಿನ ಎತ್ತಕೋಂಡಳಾ...ಕೇವಲ ೩ ದಿನದ ಹಿಂದೇನೆ ಇ ಪುಟಾಣಿಯ ಜನ್ಮ ಆಗಿತ್ತ...ಭಾಳ ಸುಂದರ ಮತ್ತು ಮುಗ್ದ ಮೋಗ ಇತ್ತ ಅತರದ. ನಾನು ನನ್ನ ಪೊಟೋಗ್ರಾಫಿ ಟ್ಯಾಲೆಂಟನ್ನ ತೋರಿಸಿದ್ನಿ...ಮಸ್ತಂದ ಒಂದ ಚಿತ್ರ ತಗದನಿ....ಇಲ್ಲಿವರೆಗೆ ತೆಗೆದ ಚಿತ್ರಗಳಲ್ಲಿ ಇದು ನನ್ನ ಅತ್ಯುತ್ತಮ ಚಿತ್ರಗಳಲ್ಲಿ ಒಂದು.

ಮನಿ ಮುಟ್ಟಿ ಮ್ಯಾಲ ಎಲ್ಲರು ಸುಧರಿಸಿಕೊಳ್ಳಾಕ ಶುರು ಮಾಡಿರ್ರ. ನಮ್ಮ ಗೈಡ ಆ ಮನ್ಯಾಗಿಂದ ಒಬ್ರ ಹೆಂಗಸಗ ಹೇಳಿ ಅಡಿಗಿ ಮಾಡಿಸಿರ್ರ....ಮತ್ತೆನ ಮದಲ ಎಲ್ಲಾರು ಹಸಿವಲೆ ಸಾಯತಿರ್ರ..ಎಲ್ಲಾರು ತಿನ್ನಾಕ ತಯಾರ ಆದ್ರ. ಮಸ್ತ ಪೈಕಿ ಮಸಾಲಾ ರೈಸ ಮಾಡಿರ್ರ ಎಲ್ಲಾರು ಖಾಸ ಖಾಸ ತಿಂದು..ನಮಗ ಅಷ್ಟ ಮುಚ್ಚಿ ನಮ್ಮ ಗೈಡ ಶರಬತ ಕೊಟ್ಟ...ನಾನು, ಬಬ್ಲಿ ಪಟಕನ ಎಲ್ಲಾ ಕುಡದ ಎನು ಗೊತ್ತಿಲ್ಲದಾವ್ರ ಗತೆ ಕುಂತು..ಹಿ ಹಿ.

ಎಲ್ಲರು ಹೊಟ್ಟಿ ತುಂಭಿ ಮ್ಯಾಲಾ ಅಬ ಅಂತ ಅಂದ್ರ...ಎಲ್ಲಾರು ವಾಪಸ ಮರಳಿ ಗುಡಿಗೆ (ಬೆಂಗಳೂರು) ಹೋಗಾಕ ತಯಾರ ಆದ್ರ...ನಾವೆಲ್ಲರು ಕುಡಿ ಸ್ವಲ್ಪ ರೊಕ್ಕಾ ಕೊಟ್ಟು ಆ ಪುಟ್ಟ ಹುಡುಗಿ ಕೈಯಾಗ.

ಮತ್ತ ವಾಪಸ ಬಾಂವ ಬಾಂವ ಅಂತ ಗಾಡಿ ವಡ್ಯಾಕ ಶುರು ಮಾಡಿದು..ಹೊಸುರ ರೋಡ ಮ್ಯಾಲ ನಂದಾ ಮತ್ತ ಸಚ್ಯಾಂದ ಬೈಕ ರೇಸ ಹತ್ತಿತ್ತಾ...ಮಸ್ತ ಇಬ್ಬ್ರು ಕಟ ಹೊಡಕೋಂತ....ಹೋಂಟಿದ್ದು...ಲಾಸ್ಟಿಗಿ ನಾನ ಮದಲ ಬನ್ನಿ....ಹಿ ಹಿ ...ಹುರ್ರೆ ಹುರ್ರೆ...ಜಿಂಗ ಚಾಕ ಜಿಂಗ ಜಿಂಗ ಚಾಕ...ಮಸ್ತ ಮನಿಗಿ ಬಂದ ಮ್ಯಾಲ ಡ್ಯಾಂಸ ಮಾಡಿದು...

ಧನ್ಯವಾದಗಳು ಎಲ್ಲಾ ಶೇಂಗಾ/ಡವಗಾ ಮಂದಿಗೆ....ಒಂದು ಮರೆಯಲಾಗದ ಪ್ರವಾಸವನ್ನಾಗಿ ಮಾಡಿ, ನಮ್ಮೇಲ್ಲರ ಮನಸ್ಸಿನಲ್ಲಿ ಮನೆ ಮಾಡೋದಕ್ಕೆ.....