Tuesday, October 30, 2007

ಮರಳಿ ಬರಲಿ ಆ ಸವಿ ದಿನಗಳು.

ಇವತ್ತ ನನಗ ಭಾಳ ಅಂದ್ರ ಭಾಳ ಖುಷಿ ಆತಾ ಗೊತ್ತು, ಎಷ್ಟೊ ದಿನಾ ಆದ ಮ್ಯಾಲೆ ಇವತ್ತ ನಾನ ಬಸ್ಸದ ಹಾರ್ನ ಕೆಳಿಶಿಕೊನ್ನಿ.
ಅದರಾಗ ಎನ ಆ ಪರಿ ವಿಶೇಷ ಐತಿ ಅನ್ನಾತೇರಿ ಎನ...ಅದಪಾ ಅದ ವಿಶೇಷ ಮದಲ ನಾವ ಸನ್ನಾಗ ಇರತಾಗ ಬಸ್ಸನ್ಯಾಗ ಅಥವಾ ಸನ್ನ ಗಾಡಿವಳಗ ಕೈಲೆ ಹಾರ್ನ ಮಾಡತಿರ್ರಲಾ, ರಬ್ಬರದ ಹಾರ್ನ - ಗಾಡಿ ಸ್ಟೆರಿಂಗ ಬಾಜುಕನ ಇರತಿತ್ತಾ , ಗಾಡಿ ಸ್ಟಾಪಗೆ ಬಂದ ಮ್ಯಾಲೆ.."ಪಾ೦ ಪಾ೦" ಅಂತ ಅವಾಜ ಮಾಡತಿತ್ತಾ ಲಾ ಹಾ೦ ಹಾ೦ ಅದ ಅದ. ಅದನ್ನ ಕೇಳಿನಿ ಎಪ್ಪಾ ಮನಸ್ಸಿಗೆ ಎಷ್ಟ ಸಂತೋಷ ತಂದ ಕೋಟ್ಟಿತ್ತಾ ಅದರ ಧ್ವನಿ ಗೊತ್ತಾ...ಭಾಳ ಖುಷಿ ಆತ...

ಒಂದ ಸಲಾ ನನಗ ಅನಿಸಿತಾ ಮತ್ತ ಯಾಕ ಈ ಸಮಯ ಹಿಂದ ಹೋಗಬಾರದಾ, ಮತ್ತ ಯಾಕ ನಾವೆಲ್ಲರು ೧೯೮೦ ಇಸವಿಗೆ ಹೊಗಬಾರದಾ, ಮತ್ತ ಯಾಕ ನಾವೆಲ್ಲಾ ಸನ್ನ ಸನ್ನ ಮಾತಿಗೆ ಹಿಂದ ಮುಂದ ವಿಚಾರ ಮಾಡಲ್ಲದನ ಮನಸ್ಸ ತುಂಭಾ ನಗಬಾರದಾ, ಮತ್ತ ಯಾಕ ನಾವ ರಾತ್ರಿ ಸ್ಟಾಪ ಆಡಬಾರದಾ, ಮತ್ತ ಯಾಕ ಲಡ್ಡು ಲಡ್ಡು ತಿಮ್ಮಯ್ಯಾ ಎನ ಬೇಕ ಮಲ್ಲಯ್ಯಾ ಆಡಬಾರದಾ, ಮತ್ತ ಯಾಕ ಮತ್ತ ಯಾಕ.....

ನಮ್ಮ ಈ ಗಡಿಬಿಡಿ ಜೀವನನ್ಯಾಗ ಎಶ್ಟೋ ಚಿಕ್ಕ ಪುಟ್ಟ ಸಂತೋಷದ ಸನ್ನಿವೇಶಗಳನ್ನು ಮರತ ಹೋಂಟೇವಿ ಅಥವಾ ಅತರ ಕಡೆ ಗಮನನ ಕೋಡವಾಲ್ಯು ಅಥವಾ ಕಳೆದುಕೋಲ್ಲಾತೇವಿ....ಇವತ್ತ ನೋಡ್ರಿ ನಾನ ಮೊಬೈಲನ್ಯಾಗ ಹಾಡಾ ಕೇಳಕೋಂತ ಕುಂತಿರಾಕಿಲ್ಲಾ ನಮ್ಮ ಕಂಪನಿ ಕ್ಯಾಬನ್ಯಾಗ ಅದಕ್ಕಾ ಆ ಹಾರ್ನ ಧ್ವನಿ ಕೇಳಿಸಿಕ್ವಾಕ ಸಾಧ್ಯ ಆತ, ಇಲ್ಲಾ ಅಂದ್ರ ಇವತ್ತನು ನಾನ ಪ್ರತಿದಿನಾ ಇದ್ದಂಗ ಇರತಿನ್ನಿ..ಇಶ್ಟ ಖುಷಿ ನನಗ ಆಗತಿರಾಕಿಲ್ಲಾ ಸದೆಕ.

ಜೀವನದಲ್ಲಿ ಕಳೆದುಹೋದ ಮಧುರ ಕ್ಷಣಗಳು ಮತ್ತ ವಾಪಸ ಬರುದಿಲ್ಲ, ಪ್ರತಿ ಕ್ಷಣಾನು ಭಾಳ ಮುಖ್ಯ. ಅದಕ್ಕ ನಾವೇಲ್ಲಾರು ಪ್ರತಿ ಕ್ಷಣವನ್ನು ಪ್ರೀತಿಯಿಂದ, ಸಂತೋಷದಿಂದ ಕಳೆಯಲು ಪ್ರಯತ್ನಿಸಬೇಕು.