Friday, March 2, 2007

ನನ್ನ ಜೀವನದಲ್ಲಿ ನಾನು ಗಳಿಸಿದ ಅತ್ಯಮುಲ್ಯವಾದಂತ ಆಸ್ತಿ............

ನನ್ನ ಜೀವನದಲ್ಲಿನ ಅತ್ಯಮುಲ್ಯವಾದಂತ ಆಸ್ತಿ....ನನ್ನ ಶೇಂಗಾ/ಡವಗಾ ಗೆಳೆಯರ ಮತ್ತು ಗೆಳೆತಿಯರ ಸ್ನೇಹತನ.

ನನಗ ನನ್ನ ಮ್ಯಾಲೆ ಭಾಳ ಹೆಮ್ಮೆ ಯಾಕ ಅಂದ್ರ ನನಗ ಹಿಂತಾ ಅಮೂಲ್ಯವಾದ ಸ್ನೇಹಿತರ ಸ್ನೇಹವನ್ನ ಪಡೆದುಕೊಳ್ಳುವ ಭಾಗ್ಯ ಸಿಕ್ಕೇತಿಲಾ ಅಂತ...

ಇ ಬ್ಲಾಗನ್ಯಾಗಾ ಭಾಳ ಎನಾ ಹೇಳಾಂಗಿಲ್ಲಾ ನಮ್ಮ ತಂಡದ ಬಗ್ಗೆ ಅಶ್ಟ ಕಿರುಚಿರು ಪರಿಚಯ ಮಾಡಿಕೊಡತೇನಿ ನಮ್ಮ ಶೇಂಗಾ/ಡವಗಾ ತಂಡದ...


೧)
ಹೆಸರು: ಗಂಗಾಧರ ಹುಬಳೆಪ್ಪನವರ
ವ್ರುತ್ತಿ: ಸಿವಿಲ ಇಂಜಿನೀರ
ಉಪಾದಿಗೋಳ: ಗಂಗನ್ನಾ ಮಂಗನ್ನಾ, ಯುನಿವರ್ಸಲ್ಲ ಅಣ್ಣಾ, ಯೇ ಗಂಗ ಅ ಅ ಅ ಅ ಅ, Sr Fire Brother (ಬೆಂಕಿ ಹಚ್ಚಪ್ಪನವರ), ಬಸವನ ಕುಡಚಿ ಗ್ಯಾಂಗ Member.
ಗುಣಗಳು: ಎಲ್ಲಾರೂದ ಭಾಳ ಕಾಳಿಜಿ ಮಾಡತಾನಾ, ನಮ್ಮೆಲ್ಲರೂದೂ ಕಷ್ಟ ಕೇಳಿ ಭಾಳ ವಿಚಾರ ಮಾಡಿ ಎಲ್ಲಾರಿಗೂ ತನ್ನ ಅಭಿಪ್ರಾಯ ಹೇಳತಾನಾ ಮತ್ತ ಅದ ಸರಿನೂ ಇರತೇತಿ ಅದ ಭಾಳ ಮುಖ್ಯ, ಪಕ್ಕಾ ರವಿ ಶಂಕರ ಭಕ್ತ.
ವಿಶೇಷತೆಗಳು: ದೊಡ್ಡಾವ್ರ ಹೆಲ್ಯಾರಲ್ಲಾ ಚಿತ್ರ ಸುಳ್ಳ ಹೇಳಾಂಗಿಲ್ಲಾ ಅಂತ ಖರೆ ನೋಡ್ರಿಪಾ...ಇವನ ವಿಶೇಷತೆ ಮಂಗ್ಯಾನ ಆಟಾ ಆಡೂದ ಹಿ ಹಿ, ಆಮೇಲೆ ಒಂದ ಚಲನಚಿತ್ರ ತಗಿಬೇಕಂತ ಭಾಳ ಮನಸ ಐತಿ ಇವಂದ ಆದ್ರ ಇನ್ನ ತನಾ ಒಂದ ಕಥೆ ತಯಾರ ಇಲ್ಲಾ, ಕ್ಯಾಮೆರಾ ತಯಾರ ಇಲ್ಲಾ...ಗೊತ್ತಿಲ್ಲಾ ಯಾವ ತರಹದ ಚಿತ್ರ ತಗ್ಯಾಂವ ಅದಾನಾ ಅಂತ ಬರೆ ಲೈಟ್ಸ ಕ್ಯಾಮೆರ ಅಂತಾನ ಹಾ ಹಾ ಹಾ, ಊಟಕ್ಕ ಕುಂತಾಗ ಪಾಪಡ, ಗುಲಾಬ ಜಾಮುನ ಸ್ವಲ್ಪ ದೂರ ಇಡ್ಬೇಕ... ಪಕ್ಕಾ ತುಡಗಾ ಇಂವಾ.
ನಕಾರಾತ್ಮಕಗಳು: ಭಾಳ ಅಜಾಗರೂಕ, ಭಾಳ ಜಲ್ದಿ ಮರಿತಾನ ಯಾವ ವಸ್ತು ಎಲ್ಲಿ ಇಟ್ಟಾನಾ ಅಂತ ವಟ್ಟ ನೆನಪ ಇರಾಂಗಿಲ್ಲಾ.
ವಿಶೇಷ ಮಾತು: ಅರೇ, ಅಲ್ಲೋ ಮಾರಯ್ಯಾ, ಆಮೇಲೆ ಎಲ್ಲಾ ತೆಲಿ ಮ್ಯಾಲಿಂದ ಹಾದ ಹೋಗು ಹಂತಾವ ಮಾತಗೋಳ.
ಗಾರ್ಹಸ್ಥ್ಯ: ಏಕಜೀವಿ
ಜನ್ಮ ದಿನಾಂಕ: ಮೇ ೪
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ಶಶ್ಯಾನ ದೊಡ್ಡ ಅಣ್ಣಾ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ದೊಡ್ಡಾಂವ ಅದಾನಾ ಮದಲಾ ಸುರತ್ಕಲದಿಂತ್ರ ಎಮ. ಟೆಕ ಮಾಡ್ಯಾನ ಅಂದ್ರ ಊಫ...ಅಡ್ಜಸ್ಟ ಆಗಾಂಗಿಲ್ಲಾ ನಮ್ಮ ಜೋಡಿ......

೨.
ಹೆಸರು: ಪಲ್ಲವಿ ಖೋತ
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಪಲ್ಲಿ, ಪಲ್ಲಿ_ಗುಲ್ಲಿ, ಡುಮ್ಮಿ, ಪಲ್ಲ್ಯಾ, ಪಲ್ಲು.
ಗುಣಗಳು: ಹುಡಗ್ಯಾರ ತಂಡದ ಪಾಲಕರೂ, ಸಲಹೆಗಾರರೂ ವಟ್ಟಿನ್ಯಾಗ ಭಾರಿ ಹುಡುಗಿ...ವಜನ ಹೆಳಾತಿಲ್ಲ ನಾನ...ಹಿ ಹಿ...ಭಾಳ ತಿಲದಾಕಿ, ಭಾಳ ರಿಯಲಿಸ್ಟಿಕ ಆಗಿ ಯೋಚನೆ ಮಾಡಾಕಿ.
ವಿಶೇಷತೆಗಳು: ಇಕಿನ ನಗು......ಇಕಿನ ನಗು ಮ್ಯಾಲ ಅಂತಿ ಎಲ್ಲಾರೂ ಫುಲ್ಲ ಫಿದಾ..ಇಕಿ ಗಂಡನ್ನ ಹಿಡಕೊಂಡ.
ನಕಾರಾತ್ಮಕಗಳು: ದಿನಾ ದಿನಾ ಡುಮ್ಮಿ ಆಗಾತಾಳ ಖರೆ ಎನ ಮಾಡವಳ್ಳ....:-(
ವಿಶೇಷ ಮಾತು: ಲೇ ಲೇ, ವಗದ ನೋಡ, ಗಿರ್ರಿ ಗುರ್ರಿ (ನನಗ ಅಂತಾಳ).
ಗಾರ್ಹಸ್ಥ್ಯ: ಮನ್ಯಾರ ಫೆಬ್ರುವರಿ ೨೫ ಮದುವೆ ಎಂಬ ಭಂದನದಲ್ಲಿ ಭಂದಿತಳಾದಳು ಇಗ ಮಿಸೇಸ ಪಲ್ಲವಿ ಜಿನಚಂದ್ರ.
ಜನ್ಮ ದಿನಾಂಕ: ನವೆಂಬರ ೯
ನಾನ ಇಕಿನ ಪರಿಚಯ ಆಗಿದ್ದ ಹೇಂಗ: ನಮ್ಮ ಶಶ್ಯಾನ ತಂಗಿ ಕಾಂಚನನ ಕೊಲೆಜಮೆಟ್ಸ, ಇವರ ಬೆಂಗಳೊರಗಿ ಪ್ರೊಜೆಕ್ಟ ಮಾಡಾಕ ಬಂದಿರ್ರ ಅವಾಗಿಂದ ಪರಿಚಯ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಇಕೀನ್ನ ಬಗ್ಗೆ ಭಾಳ ಅಂದ್ರ ಭಾಳ ಕೇಳಿನ್ನಿ ಭೆಟ್ಟಿ ಆಗೂಕಿಂತ ಮದಲನ ಎನ ಕೇಳಿನ್ನಿ ಅದ ಎಲ್ಲಾ ಖರೆ ಇತ್ತ...ಅದನ್ನ ಮ್ಯಾಲೇ ಬರದೆನಿ

೩.
ಹೆಸರು: ಶಶೀಧರ ಹುಬಳೆಪ್ಪನವರ
ವ್ರುತ್ತಿ: ನೆಟವರ್ಕ ಇಂಜಿನೀರ
ಉಪಾದಿಗೋಳ: ಬಿ ಟುದ ಏ ಟುದ ಬಿ ಟುದ ಏ...ಬಾಬಾ, Jr Fire Brother (ಬೆಂಕಿ ಹಚ್ಚಪ್ಪನವರ), ಬಸವನ ಕುಡಚಿ ಗ್ಯಾಂಗ Member.
ಗುಣಗಳು: ಎಲ್ಲಾರದು ಬಗ್ಗೆ ವಿಚಾರ ಮಾಡತಾನ, ರೊಕ್ಕದ ಬಗ್ಗೆ ಜಾಸ್ತಿ ತೆಲಿ ಕೆಡಿಸಿಕೊಳ್ಳಾಂಗಿಲ್ಲಾ ಇವಂದಾ ದಿಲ ದರಿಯಾ ಬಾಕಿ ಸಬ ಸಮುಂದರ ಐತಿ.
ವಿಶೇಷತೆಗಳು: ಭಾಳ ಜಲ್ದಿ ದೊಸ್ತಿ ಮಾಡಕೊತಾನ, ಎಲ್ಲಾದಕ್ಕನೂ ಅಡ್ಜಸ್ಟ ಆಗತಾನ, ನಮ್ಮ ತಂಡದ ರೋಮಿಯೊ (ಇಗ ಸ್ವಲ್ಪ ಶಾಂತ ಆಗ್ಯಾನ), ತೆಲ್ಯಾಗ ಮಸ್ತ ಪೈಕಿ ಶೇಂಗಾ ವಿಚಾರಗೋಳ ಜಲ್ದಿ ಬರತಾವ ಇವಂಗ, ಎಗ್ಗಳಂಗಾ ಊಟಾ ಕಟಿತಾನಾ ಪುಲ್ಲ ಹೆಬ್ಬಾವ (ನನ್ನ ಕಟ್ಟರ ಸ್ಪರ್ಧಿ), ಮಲಕೊಂಡಾಗ ಬಾಜೂದಾವನ ಮ್ಯಾಲ ಕಾಲ ಮ್ಯಾಲ ಕಾಲ ವಗದ ಮಲಕೋತಾನ ನನ್ನ ಗತೆ ಹಿ ಹಿ, ಬ್ಯಾಟ್ಟಿಂಗ ಮಸ್ತ ಪೈಕಿ ಆಡತಾನಾ ಮತ್ತ ಸುಖಿ ಜೀವಿ ಹಾಸಿಗಿ ಮ್ಯಾಲ ಬಿದ್ದ ೧ ನಿಮಿಷ ವಳಗ ನಿದ್ದಿ ಹತ್ತತೇತಿ ಮತ್ತ ಮನಗಂಡ ಗೋರಕಿ ಹೊಡಿತಾನಪಾ ಎಪ್ಪಾ...., ಮುತ್ತಿನಂತ ಅಕ್ಶರ ಬರಿತಾನ, ಹಾಂ ಇನೋಂದ ಹಾಡಾ ಮಸ್ತ ಪೈಕಿ ಹಾಡತಾನಾ.
ನಕಾರಾತ್ಮಕಗಳು: ಭಾಳ ಅಜಾಗರೂಕ..ಅದ ಅಂತಾರಲ್ಲಾ ಹಿರಿ ಅಕ್ಕನ್ನ ತಪ್ಪು ತಪ್ಪು ಹಿರಿ ಅಣ್ಣನ ಚಾಲಿ ಮನಿ ಮಂದಿಗಿ ಎಲ್ಲಾ ಅಂತ ಅದಕ್ಕ ಸರಿಯಾದ ಉದಾಹರಣೆ.
ಗಾರ್ಹಸ್ಥ್ಯ: ಏಕಜೀವಿ.
ವಿಶೇಷ ಮಾತು:
ಜನ್ಮ ದಿನಾಂಕ: ಜೂನ ೨೪.
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ಜೊಬ ಹುಡಕ್ಯಾಡಾಕ ಅಂತ ಬೆಂಗಳೂರಗಿ ಬಂದಾಗ ನಮ್ಮ ಜೊಡಿ ರೂಮ ನ್ಯಾಗ ಇದ್ದ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಇವನೂ ಮಾತಗೋಳ ಕೇಳಿ ಪುಲ್ಲ ರೋಡ ರೋಮಿಯೊನ ಅಂತ ಅನಿಸಿತ್ತ.

೪)
ಹೆಸರು: ರವಿ ಗುರುಲಿಂಗಪ್ಪಾ ಕಟ್ಟಿಮನಿ (ನನ್ನ ಮದಲನೆ ಬೆಸ್ಟ ದೊಸ್ತ....ಸ್ಪೆಶಲ ದೊಸ್ತ)
ವ್ರುತ್ತಿ: ಹಾರ್ಡವೇರ ಇಂಜಿನೀರ
ಉಪಾದಿಗೋಳ: ರೌಡಿ ಎಮ. ಎಲ. ಎ, ಚಿ, ರಾಚು, ಜಿ. ಕೆ. ರವಿ, ವಡಗಾವಿ ಗ್ಯಾಂಗ member.
ಗುಣಗಳು: ಸೂಕ್ಶ್ಮಜೀವಿ, ನೊಡಿದ್ದ ಪಸಂದ ಬಂದಿದ್ದ ಎಲ್ಲಾ ಬೇಕ, ಸ್ವಲ್ಪ ಸೆಂಟಿ, ಪ್ರಯತ್ನವಾದಿ.
ವಿಶೇಷತೆಗಳು: ಎಲ್ಲಾರ್ನೂ ನಗಿಸಿಕೊಂತ ಇರತಾನಾ, ಎನಾರ ಕೆತ್ತೆಬಜೆ ಮಾಡತಿರತಾನ, ಬಾಯಿ ವಟ್ಟ ಗಪ್ಪ ಕುಂಡ್ರಾಂಗಿಲ್ಲಾ...ಕಟಗಿದಾ ಆಗಿತ್ತ ಅಂದ್ರ ಯಾವಗಲೊ ವಡದ ಹೊಗತಿತ್ತಾ.
ನಕಾರಾತ್ಮಕಗಳು: ನೊಡಿದ್ದ ಪಸಂದ ಬಂದಿದ್ದ ಎಲ್ಲಾ ಬೇಕ, ಸಮಯಕ್ಕ ತಕ್ಕಾಗಿ ಬದಲ ಆಗಾಂಗಿಲ್ಲಾ ಸ್ವಲ್ಪ ಸಮಯ ತೊಗೊತಾನ.
ಗಾರ್ಹಸ್ಥ್ಯ: ಏಕಜೀವಿ (ಆದ್ರ ಜಲ್ದಿ ವರಗ ಬರಬೆಕಂತ ಪ್ರಯತ್ನ ಮಾಡಾತಾನಾ)
ವಿಶೇಷ ಮಾತು: ಹರಿಶ ಪಟೇಲ, ಡ್ಯಾಂಬೊ (ನನಗ ಅಂತಾನ)
ಜನ್ಮ ದಿನಾಂಕ: ಡಿಸೆಂಬರ ೧೭
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ಇವನ ಅಣ್ಣಾ ಮಹೇಶ ನನ್ನ ಹೈ ಸ್ಕೂಲ ದೊಸ್ತ ಅವನಿಂದ ಪರಿಚಯ....
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎನ ಊಡಾಳಾ ಅದಾನಪಾ ಇವಾಂ, ಎಶ್ಟಾರ ಮಾತಾಡತಾನಾ.

೫)
ಹೆಸರು: ಸಂಗಮಿತ್ರಾ ಸಿಂಗಿ
ವ್ರುತ್ತಿ: ಡಿಸೈನ ಇಂಜಿನೀರ.
ಉಪಾದಿಗೋಳ: ಸಂಗಮಿ, ಸಂಗು, ಅವ್ವು, ಸಂಗು_ಬಿಸ್ಲೆರಿ, ಕೂಲ_ಬಿಸ್ಲೆರಿ, ಅಜ್ಜಿ ( ನಾನ ಕರಿತೇನಿ ನೊಡಲಾ ನನಗ ಸರ್ ಅಂತಾಳಾ :-()
ಗುಣಗಳು: ಭಾಳ ಸೂಕ್ಷ್ಮ ಮನಸ್ಸಿನ ಹುಡಗಿ, ಮನಸ್ಸಿನಿಂದ ಭಾಳ ಅಂದ್ರ ಭಾಳ ಗಟ್ಟಿ ಎಲ್ಲಾ ನೊವನ್ನು ತನ್ನಲ್ಲಿನ ಮುಚಕೊಂಡ ಇಟಕೊಳ್ಳತಾಳ, ಭಾರಿ ಡೆಡಿಕೆಟೆಡ ಹುಡುಗಿ.
ವಿಶೇಷತೆಗಳು: ಹೋಟೆಲಗಿ ಹೊದಾಗ ಮದಲ ತನ್ನ ಪ್ಲೆಟ ಸ್ವಚ್ಚ ಐತಿ ಇಲ್ಲಾ ಅಂತ ನೋಡತಾಳಾ ( ಆದ್ರ ಏನ ಮಾಡತೇರಿ ಇಕಿನ ಪ್ಲೆಟನ್ಯಾಗನ ನೊಣ ಇಲ್ಲಾ ಹುಳಾ ಸಿಗತಾವ ಮದಲ ಹಿ ಹಿ), ಬಿಸ್ಲೆರಿ ನೀರ ಬೇಕ ಕುಡ್ಯಾಕ ಹೊರಗ ಹೊದ್ರ, ಪೊಟೊ ತೆಗ್ಯಾತೆವಿ ಅಂದ್ರ ಎನಿಲ್ಲಾದ ಖುಶಿ... ಪುಲ್ಲ ತಯಾರ ಆಗಿ ಬರತಾಳ ಮತ್ತ ನಮ್ಮಂತಾವ್ರ ಬಾಜೂಕ ಬಂದ ನಿಂತ ಅಸಯ್ಯ ಮಾಡತಾಳ ಯಾಕ ಅಂದ್ರ ನಾವ ಎಲ್ಲಾ ಎಸಿಯನ ಪೇಂಟ ಕಲರದಾವ್ರಲಾ ಸೊ ಪೊಟೊ ಎದ್ದ ಕಾನಸತೆತಿ ಅಂತ..ಜಸ್ಟ ಕೀಡಿಂಗ, ಮಸ್ತ ಪೈಕಿ ಇಂಗ್ಲಿಷ ನ್ಯಾಗ ಕವಿತೆಯನ್ನ ಬರಿತಾಳಾ, ನಮ್ಮ ತಂಡನ್ಯಾಗ ಬಂದ ಮ್ಯಾಲ ಸ್ವಲ್ಪ ನಾಟಕನೂ ಮಾಡಾಕ ಕಳತಾಳಾ (ಒಂದ ಸಲಾ ಮಾಡಿಳ್ಳಾ ಎಪ್ಪಾ ಅ ಅ ಒಸ್ಕರ ಅವಾರ್ಡ ಕೊಟ್ಟ ಬಿಟ್ಟು ಇಕಿಗಿ.....)
ನಕಾರಾತ್ಮಕಗಳು: ಸ್ವಲ್ಪ ಹುಡುಗಿ ಮುಂಗೊಪಿ...ಆದ್ರ ಇಗ ಇಗ ಸುಧಾರಸಾತಾಳಾ.
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಎನೋ, ಸರ (ನನಗ ಅಂತಾಳ), I am impressed, Everything happens for a reason.
ಜನ್ಮ ದಿನಾಂಕ: ಎಪ್ರಿಲ ೩೦
ನಾನ ಇಕಿನ ಪರಿಚಯ ಆಗಿದ್ದ ಹೇಂಗ : ನಮ್ಮ ಜಿ. ಐ . ಟಿ ಕೊಲ್ಲೆಜಮೆಟ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಬ್ಯುಟಿ ವಿತ್ತ ಬ್ರೇಣ...

೬)
ಹೆಸರು: ಹೊಳೆಪ್ಪಾ ಜಿ ಕಾಳೆ (ರಮೇಶ)
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಕಾಕಾ, ಹಾಂ ರಮೇಶ, ಕಾಳಿಬರ, ಕಾಳೆರೊಲಾ,ಬಸವನ ಕುಡಚಿ ಗ್ಯಾಂಗ Member.
ಗುಣಗಳು: ಭಾರಿ ಶಿಸ್ತಿನ ಮನಷ್ಯಾ, ಡೆಡಿಕೆಟೆಡ, ಸದಾ ಎಲ್ಲಾರಿಗೂ ಸಹಾಯ ಮಾಡುವ ದೊಸ್ತ
ವಿಶೇಷತೆಗಳು: ಎಲ್ಲಾ ಟೈಮ ಟು ಟೈಮ ಆಗಬೇಕ (ಕಾಕಾ ಶಕ್ಕರ ಡಾಲನೆಕಾ ಟೈಮ ಹೊ ಗಯಾ?) , ಊಟಾ ಆದ ಮ್ಯಾಲ ಒಂದ ಬಾಳೆಹಣ್ಣ ತಿನ್ನತಾನ, ಇಗ ಇಗ ಶೇಂಗಾ ಮಾಡಾಕ ಸೂರೂ ಮಾಡ್ಯಾನಾ.
ನಕಾರಾತ್ಮಕಗಳು: ಭಾಳ ಮಂಡ ಅಂದ್ರ ಮಂಡ, ನನಗ ಅನಸತೆತಿ ಸ್ವಲ್ಪ ಇನ್ನೂ ಫ಼್ಲೇಕ್ಸಿಬಲ ಆಗಬೇಕಂತ.
ಗಾರ್ಹಸ್ಥ್ಯ: ಏಕಜೀವಿ (ಆದ್ರ ಇದರಿಂದ ಜಲ್ದಿ ಹೊರಗ ಬರಬೆಕಂತ ಪ್ರಯತ್ನ ಮಾಡಾತಾನಾ)
ವಿಶೇಷ ಮಾತು: ನಿಮ್ಮ ಅಜ್ಜಿ, ಲೌಡಸ್ಪಿಕರ (ನನಗ ಅಂತಾನ)
ಜನ್ಮ ದಿನಾಂಕ: ಫೆಬ್ರುವರಿ ೧೯
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ನಮ್ಮ ಜಿ. ಐ. ಟಿ ಕೊಲ್ಲೆಜನ್ಯಾಗ ಮದಲನೆಯ ಸೆಮೆಸ್ಟರ ನ್ಯಾಗಿಂದ ಕ್ಲಾಸಮೆಟ ಒಂದ ಕ್ಲಾಸ, ಒಂದ ಬೆಂಚ...ಮತ್ತ ಮುಂದ ಭಾಳ ವಿಚಾರ ಮಾಡಬ್ಯಾಡ್ರಿ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಭಾಳ ಶಾನ್ಯಾ ಹುಡುಗ ಅಂತ...

೭)
ಹೆಸರು: ಸಚಿನ ಅಮ್ಮನ್ನವರ
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಬಾಲಕ, ಬಾಲಕ_ನರೆಂದ್ರ, ಟೆನಶನ ಮ್ಯಾನ, ಚೋಟಾ ಯೋಧಾ (ಇಲ್ಲಿ ಜರ್ಮನಿ ನ್ಯಾಗ ಹೆಸರ ಇಟ್ಟಿದ್ದಾ).
ಗುಣಗಳು: ಭಾರಿ ಡೆಡಿಕೆಟೆಡ ಮನಶ್ಯಾ, ಪರಿಶ್ರಮಿ, ಒಳ್ಳೆಯ ಹ್ಯುಮರ ಸೆಂಸ.
ವಿಶೇಷತೆಗಳು: ಜೀವನ ನ್ಯಾಗ ಭಾಳ ಟೆನಶನ ತೋಗೊತಾನಾ, ಪೊಲಿಟಿಕ್ಸ ಮತ್ತ ಕ್ರಿಕೇಟ ಅಂದ್ರ ಪುಲ್ಲ ರಡಿಯಾಗಿ ನಿಂದರತಾನಾ ಮಾತಾಡಾಕ, ಇಗ ಇಗ ಶೇರ ಮಾರ್ಕೆಟ ನ್ಯಾಗ ತೆಲಿ ಹಾಕಾತಾನ.
ನಕಾರಾತ್ಮಕಗಳು: ಟೆನಶನ ತೋಗೊದ, ಒಮ್ಮೆ ಮಕದ ಮ್ಯಾಲ ಎನ ಮನಸನ್ಯಾಗ ಐತಿ ಅದನ್ನ ಅಂದ ಬಿಡೂದ, ಮತ್ತ ಹುಡಗ್ಯಾರ ಅಂದ್ರ ಮಾತಾಡಾಕ ಹಿಂಜೆರಿಯೂದು.
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಯಾನ, ನಮ್ಮ ಊರಾಗ ಜೀ ಟಿ.ವಿ ಬಿಡತಾರ.
ಜನ್ಮ ದಿನಾಂಕ: ಸೆಪ್ಟಂಬರ ೧೭
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ನಮ್ಮ ಜಿ. ಐ. ಟಿ ಕೊಲ್ಲೆಜನ್ಯಾಗ ೩ ಸೆಮೆಸ್ಟರ ತಿಂದ್ರ ಕ್ಲಾಸಮೇಟ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಇವಾ ನಮ್ಮ ಜೋಡ್ಯಾವ....?

೮)
ಹೆಸರು:
ಆಶಾ ಕಮತಗಿ
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಆಶಾ_ಆಲಸಿ, ಆಶು, ಆಶಿ_ಗುಶಿ.
ಗುಣಗಳು: ಭಾಳ ಜಲ್ದಿ ಯಾರನ್ನ ಸಮೀಪ ತೊಗಾಂಗಿಲ್ಲಾ (ನನ್ನ ಹೆಂಗ ತೊಗೊಂಡಳ್ಳೊ ಕೆಳಬೆಕಾಗೇತಿ), ಹುಡುಗಿ ಒಂದ ಸ್ವಲ್ಪ ಸೆಂಸಿಟಿವ, ಬೆಂಕಿ ಹತ್ತಿದಾಗ ಬಾವಿ ತೋಡಾಕ ಹೋಗತಾಳ.
ವಿಶೇಷತೆಗಳು: ಭಾಳ ಆಲಸಿ (ಊಟಾ ಮಾಡಿ ಹಂಗ ಕುಂಡರತಾಳ ಯಾರರ ಬಂದ ಕೈ ಮತ್ತ ತಾಟ ತೋಳದ ಹೊಗಲಿ ಅಂತ...), ಜಂಗ ಪಂಗ ತಯಾರ ಆಗತಾಳ ಎಲ್ಯಾರ ಹೋಗಬೇಕಂದ್ರ, ಟುಬ ಲೈಟ - ಯಾವಗಲು ತನ್ನ ಲೋಕನ್ಯಾಗನ ಇರತಾಳ ಒಮ್ಮೆ ಎಚ್ಚರ ಆದಾಕಿನ ಎನ ಆತ ಎನ ಆತ ಅಂತ ಕೇಳತಾಳ, ಕನ್ನಡ ಹಾಡಿನ ಮಹಾನ ಅಭಿಮಾನಿ ಮಸ್ತ್ ಹಾಡತಾಳ ಕನ್ನಡ ಹಾಡಗೋಳನ್ನ.
ನಕಾರಾತ್ಮಕಗಳು: ಆಲಸಿತನಾ, ಬೆಂಕಿ ಹತ್ತಿದಾಗ ಬಾವಿ ತೋಡು ಚಟಾ.
ಗಾರ್ಹಸ್ಥ್ಯ: ಏಕಜೀವಿ.
ವಿಶೇಷ ಮಾತು: ರಾಕ್ಶಸ, ಎನೋ ಎನೋ, ಗಿರ್‍ಯಾ ಗುರ್‍ಯಾ (ನನಗ ಅಂತಾಳ)
ಜನ್ಮ ದಿನಾಂಕ: ಡಿಸೆಂಬರ ೧೭
ನಾನ ಇಕಿನ ಪರಿಚಯ ಆಗಿದ್ದ : ನಮ್ಮ ಶಶ್ಯಾನ ತಂಗಿ ಕಾಂಚನನ ಕೊಲೆಜಮೆಟ್ಸ, ಇವರ ಬೆಂಗಳೊರಗಿ ಪ್ರೊಜೆಕ್ಟ ಮಾಡಾಕ ಬಂದಿರ್ರ ಅವಾಗಿಂದ ಪರಿಚಯ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಮದಲನೇ ಸಲಾ ನಾನ ನೋಡಿ ಭಾಳ ಹೈರಾನ ಆಗಿನ್ನಿ ಯಾಕ ಅಂದ್ರ ಅವಾಗ ಇಕಿಗಿ ಪಲ್ಲಿ(ಪಲ್ಲವಿ) ತನ್ನ ಕೈಯಾರೆ ತೂತ್ತ ಮಾಡಿ ಉನ್ನಸಾತಿಳ್ಳ ಭಾಳ ಹ್ರುದಯಕ್ಕ ಟಚಿಂಗ ಆಗು ಅಂತ ಸಿನ ಇತ್ತ ಅದ,ಮನಸ ಕರಿಗಿ ಹೊಗಿತ್ತ ಇವರದ ಸ್ನೇಹವನ್ನು ನೋಡಿ..

೯)
ಹೆಸರು:
ಸಾತಲಿಂಗಯ್ಯ ಹಿರೇಮಠ
ವ್ರುತ್ತಿ: ಮೇಕ್ಯಾನಿಕಲ ಇಂಜಿನೀರ
ಉಪಾದಿಗೋಳ: ಅಜಯ_ನೊನಸೆಂಸ, ಪಾವ ಕೀಲೊ, ಸೊಳಪಾಟ್ಯಾ, ಮಿಥುನದಾ, ಸಾಮಗೋಳ
ಗುಣಗಳು: ಭಾಳ ಜಲ್ದಿ ಹೊಂದಕೊತಾನ, ಭೇದ ಭಾವ ವಟ್ಟ ಮಾಡಾಂಗಿಲ್ಲಾ, ದೊಸ್ತರಿಗಿ ಭಾಳ ಸಹಾಯ ಮಾಡತಾನಾ.
ವಿಶೇಷತೆಗಳು: ಭಾಳ ಅಂದ್ರ ಭಾಳ ಶಾನ್ಯಾ ತಮ್ಮ ಮೇಕ್ಯಾನಿಕಲ ಡಿಪಾರ್ಟಮೆಂಟ ಟೊಪ್ಪರ (ನವೋದಯ ಪ್ರೊಡಟ್ಕ), ಭಾಳ ತೆಲಿ ಒಡಸಾಕ ಹೊಗತಾನ.
ನಕಾರಾತ್ಮಕಗಳು: ಭಾಳ ತೆಲಿ ಒಡಸಾಕ ಹೊಗತಾನ ಆದ್ರ ಅದರ ತಕ್ಕ ನಡಕೊಳ್ಳಾಂಗಿಲ್ಲಾ, ಸಮಯದ ಮಹತ್ವ ವಟ್ಟ ಇಲ್ಲಾ ಬರತೆನಿ ಅಂತ ಹೇಳತಾನ ಆದ್ರ ಪಾರ್ಟಿ ಪತ್ತೆನ ಇರಾಂಗಿಲ್ಲಾ.
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಅವನ *॒॑!, ಹುಚ್ಚ %‍ಽ* ‍ಽಽ*,
ಜನ್ಮ ದಿನಾಂಕ: ಮೇ ೭.
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ನಮ್ಮ ಜಿ. ಐ. ಟಿ ಜುನಿಯರ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಭಾಳ ಅಂದ್ರ ಭಾಳ ಶಾನ್ಯಾ ಅಂತ.

೧೦)
ಹೆಸರು:
ಮಮತಾ ಗಜಾರೆ
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಮಮತಾ_ಖೋ,ಮಮತಾ_ಗೊತ್ತಿಲ್ಲಾ, ಹರಕ್ಯುಲಿಸನ ತಂಗಿ ಮರಕ್ಯುಲಿಸ, ಕುಸುಮಿ (ನಾನ ಕರಿಯುದ)
ಗುಣಗಳು: ಭಾಳ ಇಮೊಶನಲ, ಭಾಳ ಕೆರಿಂಗ, ಹೆಲ್ಪಿಂಗ, ಸ್ವಲ್ಪ ಸಿಟ್ಟ ಬರತೇತಿ ಆದ್ರ ಜಲ್ದಿ ಹೊಗತೇತಿ, ಮನಸ್ಸ ಬಿಳಿ ಹಾಳಿ....
ವಿಶೇಷತೆಗಳು: ಬ್ಯುಟಿ ವಿತ್ತ ಬ್ರೆಣ, ಇಕಿಂದ ಸ್ಮೈಲ, ಅಡಗಿ ಮಸ್ತ ಮಾಡತಾಳ (ಸ್ಪೆಶಲಿ ಚಪಾತಿ, ದಮ ಬಿರ್ಯಾನಿ, ಚಿಕನ ಕರ್ರಿ...ಇವಾ ಅಶ್ಟ ಯಾಕ ಹೆಳಾತೇನಿ ಅಂದ್ರ ನನ್ನು ಫೆವರೆಟಲಾ :-)), ಪ್ರಯತ್ನವಾದಿ, ಭಾಳ ಜಲ್ದಿ ಎನ ಹಚ್ಚಿಕೊಳ್ಳಾಂಗಿಲ್ಲಾ ಆದ್ರ ಒಂದ ಸಲಾ ಹಚ್ಚಕೊಂಡಳ ಅಂದ್ರ ಅದನ್ನ ಸರಿಯಾಗಿ ನಿಭಾಯಿಸತಾಳ, ಭಾಳಾ ಎಕ್ಟಿವ ಹುಡುಗಿ (ಅದ ಎಲ್ಲಿಂದ್ರ ಅಶ್ಟ ಸ್ಪೂರ್ತಿ ತಗೊಂಡ ಬರತಾಳಾ ನಾಕಾನೆ ಎಂಟಾನೆ...(ಲೇ ಮತ್ತ ಶೆಂಗಾ ವಗದಿ ಎಂದಾ ಸುಧಾರಸಾಂವಲೆ ನೀ ಶೆಂಗಾಮ್ಯಾನ), ಒಂದ ಒಂದ ಸಲಾ ಅನಸತೇತಿ ಸ್ವಲ್ಪ ಜಾಸ್ತಿ ಮಾತಾಡತಾಳಾ ಅಂತ ಇದ ಯಾವಾಗ ಅನಸತೆತಿ ಅಂದ್ರ ಯಾವಾಗ ನನಗ ಕೇಳು ಮನಸ ಇರಂಗಿಲ್ಲಾ ಆದ್ರ ಇಕಿ ಹಂಗ ಮಾತಾಡತಿರತಾಳಾ....ಹಿ ಹಿ, ಇನ್ನು ಸನ್ನ ಹುಡುಗಿವ ಗುಣಗೋಳ ಅದಾವ ಪಕ್ಕಾ ಸನ್ನಾ ಹುಡಗ್ಯಾರ ಅತ್ತಂಗ ಅಳತಾಳ....ಎನ ಹುಡಗಿನೋ.
ನಕಾರಾತ್ಮಕಗಳು: ಇಗ ಸದ್ದೆಕ್ಕ ಎನಿಲ್ಲಾ ಆದ್ರ ಮದಲ ಇದ್ದು....
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಅರ್ರೆ, ಮಂಗ್ಯಾ,ನಿಂಗ ಗೊತ್ತು, (ಗಿರ್ರ್ಯಾ ಗುರ್ರ್ಯಾ, ಶಾನೂ, ದೊಡ್ದ ಮಂಗ್ಯಾ, ಶೇಂಗಾ ಮಂಗ್ಯಾ - ನನಗ ಅಂತಾಳಾ)
ಜನ್ಮ ದಿನಾಂಕ: ಡಿಸೆಂಬರ ೪
ನಾನ ಇಕಿನ ಪರಿಚಯ ಆಗಿದ್ದ ಹೇಂಗ: ನಮ್ಮ ಶಶ್ಯಾನದಿಂತ ಪರಿಚಯ
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎನ ಹುಡುಗಿ ಇಕಿ ಎನ ಚೆಂದಂಗೆ ಮಾತಾಡಾಂಗಿಲ್ಲಾ ಎನಿಲ್ಲಾ....ಸ್ವಲ್ಪ ರಿಸರ್ವಡ ಅದಾಳಾ ಅಂತ.

೧೧)
ಹೆಸರು:
ಕಾಂಚನ
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಕೋಳಿ.
ಗುಣಗಳು: ಭಾರಿ ಸೆಂಸಿಟಿವ ಹುಡುಗಿ, ಕನ್ನಡ ಮಾತಿನಲ್ಲಿ ಪಾರಿನ್ಯತೆ ಹೋಂದಿರಾಕಿ.
ವಿಶೇಷತೆಗಳು: ಜಗತ್ತನ್ನ ತನ್ನ ತೆಲಿ ಮ್ಯಾಲ ಹೊತ್ತಕೊಂಡ ಹೊಡ್ಯಾಡತಾಳ, ಎಲ್ಲಾರೂ ಬಗ್ಗೆ ಭಾಳ ಕಾಳಿಜಿ ಮಾಡತಾಳ, ವಟ್ಟ ಒಂದ ಸನ್ನಿವೇಶ ನ್ಯಾಗ ಇರಾಂಗಿಲ್ಲಾ ಒಮ್ಮೆ ಎದ್ದಾಕಿನ ಸನ್ನಿವೇಶನ ಬದಲ ಮಾಡತಾಳ....ಟೊಪಿಕ ಚೆಂಜರ, ಇಕ್ಕಿನ ಬೈಕ ಸ್ಟಾಟ ಮಾಡುವಾಗ ಬರೂ ಧ್ವನಿ ಹಂತಾ ನಗಿ.....
ನಕಾರಾತ್ಮಕಗಳು: ಜಗತ್ತನ್ನ ತನ್ನ ತೆಲಿ ಮ್ಯಾಲ ಹೊತ್ತಕೊಂಡ ಹೊಡ್ಯಾಡೂದ
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಹೌದಾ, ಎನೋ ವಟ್ಟ ಟೊಪಿಕ ಚೆಂಜ ಆಗಿರಬೇಕ...
ಜನ್ಮ ದಿನಾಂಕ: ನವಂಬರ ೭
ನಾನ ಇಕಿನ ಪರಿಚಯ ಆಗಿದ್ದ ಹೇಂಗ: ನಮ್ಮ ಶಶ್ಯಾನ ತಂಗಿ, ಇವಳ ಬೆಂಗಳೊರಗಿ ಪ್ರೊಜೆಕ್ಟ ಮಾಡಕಾ ಬಂದಿರ್ರ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎನಪ್ಪಾ ಕಾಲಾಗ ಎನಾರ ಗಾಲಿ ಗಿಲಿ ಅದಾವ ಎನಾ?

೧೨)
ಹೆಸರು:
ಕಿರಣ
ವ್ರುತ್ತಿ: ಎಮ. ಬಿ. ಎ (ಮಾರ್ಕೆಟಿಂಗ)
ಉಪಾದಿಗೋಳ: ಯೋ ಮ್ಯಾನ.
ಗುಣಗಳು: ಸೂಟ ಮಾತಗೋಳ - ಮನಸ್ಸಿನ್ಯಾಗ ಎನ ಬರತೇತಿ ಮಕದ ಮ್ಯಾಲ ಅಂದ ಬಿಡತಾನಾ,
ವಿಶೇಷತೆಗಳು: ಮುರ್ತಿಗಿಂತ ಕಿರ್ತಿ ದೊಡ್ಡದ ಅಂತಾರಲ್ಲಾ ಅದಕ್ಕ ತಕ್ಕ ಊದಾಹರಣೆ - ವಯಸ್ಸಿಗಿಂತಾ ಜಾಸ್ತಿ ಬುದ್ದಿ, ಹ್ಯುಮರ ಸೆಂಸ ಅಂತಿ ಭಾಳ ಐತಿ, ಕ್ರಿಯೆಟಿವ ತೆಲಿ ಮಾರ್ಕೆಟಿಂಗ ಜೋಬಗಿ ಪರ್ಫೆಕ್ಟ ಸೂಟ.
ನಕಾರಾತ್ಮಕಗಳು: ಒಂದ ಒಂದ ಸಲಾ ಸೂಟ ಮಾತಗೋಳ ಸರಿ ಅನಸಾಂಗಿಲ್ಲಾ.
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಸಿರಿಯಸ ಮಕ್ಶರಿ, ಲೇ ಹೊಗೊಲೆ.
ಜನ್ಮ ದಿನಾಂಕ: ಅಕ್ಟೊಬರ ೬
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ನಮ್ಮ ಶಶ್ಯಾನ ಕಜಿನ ಬ್ರದರ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎನಪಾ ಯೋ ಮ್ಯಾನ.

೧೩)
ಹೆಸರು: ಬಬಿತಾ ಗಜಾರೆ
ವ್ರುತ್ತಿ: ಡಿಪ್ಲೊಮಾ ಇಂಜಿನೀರ
ಉಪಾದಿಗೋಳ: ಬಬ್ಲಿ_ಗುಬ್ಲಿ, ಬಬ್ಬಿ.
ಗುಣಗಳು: ಶಾಂತ, ಸಮಾಧಾನ.
ವಿಶೇಷತೆಗಳು: ಇಕಿ ಗುಣಾ ತಕ್ಕಾಗಿ ಇಕಿಂದ ಅವಾಜನೂ, ಇಶ್ಟ ಜೊರ ಮಾತಾಡತಾಳ ಅಂದ್ರ ೧ ಸೆಂಟಿಮೀಟರ ದೂರ ಅಂದ್ರ ದೂರ ಕುಂತಾಂವಗಿ ಭಾಳ ಸವಾಕಾಶ್ಯ ಕೇಳತೆತಿ...ಹಿ ಹಿ.
ನಕಾರಾತ್ಮಕಗಳು: ಮುಂದ ಬರೂದ ಛಲಾನ ಇಲ್ಲಾ (ನನಗ ಅನಸತೇತಿ ಆದ್ರ ನಾನು ತಪ್ಪನು ಇರಬಹುದು...)
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಬರೆ ಹೂಂ ಹೂಂ ಅಂತಾಳಾ, ನೀ ಎಲ್ಲಿ ಅದಿ ಅಂತ ಪೊನ ನ್ಯಾಗ ಕೇಳಿರ ಬಸನ್ಯಾಗ ಅಂತ ಹೇಳತಾಳ..ಶಾನಿ.
ಜನ್ಮ ದಿನಾಂಕ: ಮೇ ೧೬
ನಾನ ಇಕಿನ ಪರಿಚಯ ಆಗಿದ್ದ ಹೇಂಗ: ಮಮತಾನ ತಂಗಿ
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಸೈಲೆಂಟ...............

೧೪)
ಹೆಸರು: ಅಮೋಲ ಮುನಾಸೆ
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಸಿನಿಯರ ಫಕ್ರುದಿನ್ನ, ಅಮೋಲಯಾ.
ಗುಣಗಳು: ಜಲ್ದಿ ದೊಸ್ತಿ ಬೆಳಿಸಿಕೊತಾನಾ...
ವಿಶೇಷತೆಗಳು: ಪಕ್ಕಾ ಶೇಂಗಾ, ಮಸ್ತ ಎಲ್ಲಾರ್ನೂ ನಗಿಸಿಕೊಂತ ಇರತಾನಾ.
ನಕಾರಾತ್ಮಕಗಳು: ಎಲ್ಲಾ ಸನ್ನಿವೆಶನ್ಯಾಗ ಮಜಾಕ ಉಡಾಸೂದ ಸರಿಯಲ್ಲಾ.
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಔರ್ ಕ್ಯಾ ಮಾಮು.
ಜನ್ಮ ದಿನಾಂಕ: ಜನೇವರಿ ೧೭
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ಪಲ್ಲಿ, ಕಾಂಚನ, ಆಶಾನ ಕೊಲ್ಲೆಜಮೇಟ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ನಂದ ಇವಂದ ಜೋಡಿ ಮಸ್ತ ಐತಿಲಾ.


೧೫)
ಹೆಸರು: ರಾಜು ಮಿರಜೆ
ವ್ರುತ್ತಿ: ಸಿಸ್ಟೆಮ ಅಡ್ಮಿನ.
ಉಪಾದಿಗೋಳ: ಮಾಮು, ಸಿರಿಯಸ, ದಬ್ಬ, ವಡಗಾವಿ ಗ್ಯಾಂಗ member.
ಗುಣಗಳು: ಭಾಳ ಪ್ರಯತ್ನವಾದಿ, ಡೆಡಿಕೇಟೆಡ ಮನಶ್ಯಾ.
ವಿಶೇಷತೆಗಳು: ಮುಂದ ಬರೂ ಛಲಾ ಐತಿ, ಬೆರೆ ಬೆರೆ ವಿಷಯಗಳನ್ನೂ ಕಲಿಬೆಕನ್ನು ಇಚ್ಚೆ ಐತಿ.
ನಕಾರಾತ್ಮಕಗಳು: ಎನು ಇಲ್ಲಾ...
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಔರ್ ಮಾಮು ಕ್ಯಾ ಕರ ರಹಾ ಹೈ, ಎಲ್ಲಾ ನಿಮ್ಮ ಆಶಿರ್ವಾದಪಾ.
ಜನ್ಮ ದಿನಾಂಕ:
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ರವ್ಯಾನ ಖಾಸಮ ಖಾಸ ದೊಸ್ತ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಡುಮ್ಮ ಡುಮ್ಮ....

೧೬)
ಹೆಸರು: ಸಂತೋಷ ದಿನ್ನಿಮನಿ
ವ್ರುತ್ತಿ: ಮೆಕ್ಯಾನಿಕಲ ಇಂಜಿನೀರ
ಉಪಾದಿಗೋಳ: ಸ್ಯಾನ.., ಸಂತು, ವಡಗಾವಿ ಗ್ಯಾಂಗ member.
ಗುಣಗಳು: ಭಾಳ ವಳ್ಳೆಯ ಮನಶ್ಯಾ, ಹೆಲ್ಪಿಂಗ, ಕೇರಿಂಗ....
ವಿಶೇಷತೆಗಳು: ಪೇಂಟಿಂಗ ಮಸ್ತ ಮಾಡತಾನಾ, ಕ್ರಿಯೆಟಿವ ತೆಲಿ ಐತಿ, ನಗಿಸಿಕೊಂತ ಇರತಾನ ಎಲ್ಲಾರನೂ.
ನಕಾರಾತ್ಮಕಗಳು: ಎನು ಇಲ್ಲಾ
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಯೂರ ಪೆನ..........., ಗಾಯ.......ಹಿ ಹಿ ನನಗ ನಗಿ ಬರಾತೇತಿ ಬರ್ಯಾಕ ಆಗವಾತ್ತ.
ಜನ್ಮ ದಿನಾಂಕ: ಜುಲೈ ೧೬
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ನಮ್ಮ ಮನಿ ಬಾಜೂಕನ ಇರತಿದ್ದ..ನಾನ ೯ ನ್ಯಾಗ ಇದ್ದಾಗ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎನಪಾ ಭಾಳ ಶಾನ್ಯಾ ಇರಬೆಕಲಾ ಇವಾಂ.

೧೭)
ಹೆಸರು: ಉದಯ
ವ್ರುತ್ತಿ: ಇನ್ನ ಒದಾತಾನ (ಬಿ. ಇ)
ಉಪಾದಿಗೋಳ: ಉದ್ಯಾ
ಗುಣಗಳು: ಎನ ಹೇಳಲಿ ಇವನ ಬಗ್ಗೆ.....ಸುಳ್ಳ ಹೇಳಾಕ ಆಗವಾತ್ತ...ಹಿ ಹಿ
ವಿಶೇಷತೆಗಳು: ಎಪ್ಪಾ ಇಷ್ಟ ನಗಸಾವ್ರನ್ನ ನಾನ ನೋಡಿರಾಕಿಲ್ಲಾಪಾ....ಒಂದೊಂದ ಮಾತಿಗಿನೂ ನಗಸತಾನಾ, ಹ್ಯುಮರ ಸೆಂಸ ಅಂತಿ ಥುಂಬಿ ಥುಂಬಿ ತುಳಕ್ಯಾಡಾತೈತಿ.
ನಕಾರಾತ್ಮಕಗಳು: ಎನಿಲ್ಲಾ
ಗಾರ್ಹಸ್ಥ್ಯ: ಏಕಜೀವಿ.
ವಿಶೇಷ ಮಾತು: ಇವನ ಎಲ್ಲಾ ಮಾತಗೊಳ ವಿಶೇಷನಾ....
ಜನ್ಮ ದಿನಾಂಕ: ಗೊತ್ತ ಆದ ತಕ್ಶನಾನ ಹಾಕತೇನಿ
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ಕಿರಣ ಯೋ ಮ್ಯಾನನ ತಮ್ಮಾ
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎಪ್ಪಾ ನನ್ನ ಕಟ್ಟರ ಕೊಂಪಿಟಿಟರ ಬಂದ ಅಂತ...

೧೮)
ಹೆಸರು: ರವಿ ಪಾಮೋಜಿ
ವ್ರುತ್ತಿ: ಎಮ. ಬಿ. ಎ (ಕೆಲಸಾ ಹುಡಕ್ಯಾಡಾತಾನ)
ಉಪಾದಿಗೋಳ: ಪಾಮ_ಆಯಿಲ.
ಗುಣಗಳು: ಜಾಸ್ತಿ ಗೋತ್ತಿಲ್ಲಾ ಎನ ಗೋತ್ತ ಐತಿ ಅಂದ್ರ...ಭಾಳ ಸೆಂಸಿಟಿವ ಮನಶ್ಯಾ.
ವಿಶೇಷತೆಗಳು: ಪಕ್ಕಾ ಶೇಂಗಾ....ನನ್ನ ಸದೆಕ ಬಿಡಾಂಗಿಲ್ಲಾ ಇಂವಾ... ಕಾಡತಾನ....ಹಿ ಹಿ
ನಕಾರಾತ್ಮಕಗಳು: ಎನು ಇಲ್ಲಾ
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಅನ್ನಾ...
ಜನ್ಮ ದಿನಾಂಕ: ಸಪ್ಟೆಂಬರ ೨೪
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ಗಂಗನ್ನ ರೂಮಿಗಿ ಜೋಬ ಹುಡಕ್ಯಾಡಾಕ ಬಂದಿದ್ದಾ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ನಮ್ಮಿಬ್ಬರದು ಕಲರ ಒಂದ ಐತಿಲಾ ಎನ ಅನ್ನಾ ತಮ್ಮಾ ಎನಪಾ ಇಬ್ಬರು ನಾವ......?

೧೯)
ಹೆಸರು:
ಸಂತೋಷ ಪಾಟೀಲ
ವ್ರುತ್ತಿ: ಎಮ. ಸಿ. ಎ (ಇನ್ನ ಕೆಲಸಾ ಹುಡಕ್ಯಾಡಾತಾನ)
ಉಪಾದಿಗೋಳ: ಸಂತ್ಯಾ_ಗುಂತ್ಯಾ.
ಗುಣಗಳು: ಭಾರಿ ಸೈಲೆಂಟ ಮನಶ್ಯಾ.
ವಿಶೇಷತೆಗಳು: ಇವನೂ ಬಿಜಾಪುರ ಸ್ಟೈಲ ಮಾತಗೋಳ.
ನಕಾರಾತ್ಮಕಗಳು: ನನಗ ಗೂತ್ತ ಇದ್ದಿದ್ದೂ ಎನೂ ಇಲ್ಲಾ.
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು:
ಜನ್ಮ ದಿನಾಂಕ: ಜನೇವರಿ ೮
ನಾನ ಇವನ ಪರಿಚಯ ಆಗಿದ್ದ ಹೆಂಗ: ಪಲ್ಲಿ, ಕಾಂಚನ, ಆಶಾನ ಎಮ. ಸಿ. ಎ ಕೊಲ್ಲೆಜಮೇಟ
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎಷ್ಟ ಭಾರಿ ಅದಾನೋ ಇವಾಂ..ಹಿ ಹಿ